Nojoto: Largest Storytelling Platform

ದಾರಿಯುದ್ದಕ್ಕೂ ವನವಾಸ, ಅಗ್ನಿ ಪರೀಕ್ಷೆ ಹೇಗೆ ದಾಟುತ್ತೀಯ

ದಾರಿಯುದ್ದಕ್ಕೂ ವನವಾಸ, ಅಗ್ನಿ ಪರೀಕ್ಷೆ 
ಹೇಗೆ ದಾಟುತ್ತೀಯೆ ನನ್ನ ಮಗಳೆ?
'ನಸ್ತ್ರೀ ಸ್ವಾತಂತ್ರ್ಯ ಮರ್ಹತಿ' ಎಂದು 
ವಟಗುಟ್ಟತ್ತಲೇ ಇದೆ ಮನು ಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ ಶ್ರೀರಾಮ 
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ ದ್ರೌಪತಿ ಜೂಜಿಗೆ
ವಸ್ತುವಾಗಳಿದದ್ದು ಎಂಥ ವಿಪರೀತ!

ದ್ರೌಪದಿಯಂತೆ ಎಲ್ಲರಿಗೂ ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷ್ಮಣರೇಖೆ,
ದಾಟಿ ನಡಿದೇನೆಂಬ ಧೈರ್ಯವಿಲ್ಲ.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ 
ಮಗಳೇ.ದಾಟಿ ಬಾ ಮಹದೇವಿಯಕ್ಕನ ಹಾಗೆ 
ನಿರ್ಭಯದ ನಿಲುವಿಗೆ. ಆತ್ಮಗೌರವದ ಗಿರಿಶಿಖರ
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ. 
(ಜಿ.ಎಸ್. ಶಿವರುದ್ರಪ್ಪ)

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #MoonAndMe
ದಾರಿಯುದ್ದಕ್ಕೂ ವನವಾಸ, ಅಗ್ನಿ ಪರೀಕ್ಷೆ 
ಹೇಗೆ ದಾಟುತ್ತೀಯೆ ನನ್ನ ಮಗಳೆ?
'ನಸ್ತ್ರೀ ಸ್ವಾತಂತ್ರ್ಯ ಮರ್ಹತಿ' ಎಂದು 
ವಟಗುಟ್ಟತ್ತಲೇ ಇದೆ ಮನು ಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ ಶ್ರೀರಾಮ 
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ ದ್ರೌಪತಿ ಜೂಜಿಗೆ
ವಸ್ತುವಾಗಳಿದದ್ದು ಎಂಥ ವಿಪರೀತ!

ದ್ರೌಪದಿಯಂತೆ ಎಲ್ಲರಿಗೂ ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷ್ಮಣರೇಖೆ,
ದಾಟಿ ನಡಿದೇನೆಂಬ ಧೈರ್ಯವಿಲ್ಲ.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ 
ಮಗಳೇ.ದಾಟಿ ಬಾ ಮಹದೇವಿಯಕ್ಕನ ಹಾಗೆ 
ನಿರ್ಭಯದ ನಿಲುವಿಗೆ. ಆತ್ಮಗೌರವದ ಗಿರಿಶಿಖರ
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ. 
(ಜಿ.ಎಸ್. ಶಿವರುದ್ರಪ್ಪ)

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #MoonAndMe