Nojoto: Largest Storytelling Platform
sreemathisureshb6896
  • 286Stories
  • 123Followers
  • 7.3KLove
    30.7KViews

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

I am student

  • Popular
  • Latest
  • Repost
  • Video
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಮರೆತು ಬಿಟ್ಟೆ ನಾ
ಮನದ ಪ್ರೀತಿ ನಾ
ಮನೆತನದ ಗೌರವಕ್ಕಾಗಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #WalkingInWoods
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಆಧುನಿಕತೆಯ 
ಆದರ್ಶವನ್ನ 
ನಾನ್ಹೇಗೆ ಬಿತ್ತಲ್ಲಿ 
ನನ್ಹಳ್ಳಿಗರಲ್ಲಿ ..

ಮೂಢನಂಬಿಕತೆಯ
ಮೌಢ್ಯತೆಯು 
ಬಲವಾಗಿ ಬೆಳೆದು 
ಬಿಟ್ಟಿದೆ ಅವರುಗಳ 
ಮನಗಳಲ್ಲಿ - ಮನೆಗಳಲ್ಲಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ಬಲಹೀನವಾಗಿಸುವ 
ಬಂಧನಗಳಲ್ಲಿ ಬಂಧಿತರಾಗಬಾರದು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #love_shayari
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಬರೆಯಬೇಕಿದೆ ಇಂದು ಕನಸಿನ ಕವನ 
ಕನಸಿನ ಲೋಕದ ಜಾಡು ಹಿಡಿದು..
ಬದುಕಿನ ಪುಟದ ಸವಿ ನೆನಪುಗಳ ತೆಗೆದು..
ಮರೆಯಬೇಕಿದೆ ಇಂದು ನೋವಿನ ಕಥೆಯಾ
ನಾಳೆಯ ಹೊಸತನದ ಬದುಕ ನೆನೆದು.

ನಾಳೆಗಳ ನಾಳೆಯ ಪ್ರೀತಿಸುತ್ತಾ 
ಬದುಕಬೇಕಿದೆ ಇಲ್ಲಿ ಸ್ನೇಹ ಬೆಳೆಸುತ್ತಾ 
ಜೀವನದ ಕನಸುಗಳ ಪೋಣಿಸುತ್ತಾ
ಕನಸ ನನಸಾಗಿಸುವ ಹೆಜ್ಜೆಯಿಡುತ್ತಾ.
Art by Nandu.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಮರಳಿ ಬಂದು ಬಿಡುವೆಯ 
ನನ್ನೆದೆಯ ಗೂಡಿಗೆ 
ಮನವೇಕೋ ಹಂಬಲಿಸುತ್ತಾ 
ನೆನಯುತ್ತಿದೆ ಆ ಗಳಿಗೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

"ಹೇ ಗುರುದೇವ"
ಮತ್ತಿನ್ನೇನು ಬ್ಯಾಡ 
ಈ ಜೀವಕ್ಕ 
ನಿನ್ನೊಲವೊಂದ ಸಾಕ 
ನಾ ನೆಮ್ಮದಿಯಾಗಿ ಬದುಕಲಿಕ್ಕ..

ನೀನಷ್ಟೇ ಜೊತೆಗಿದ್ದು 
ಬಿಡು ಸಾಕ 
ಬಂಗಾರವಾಗುವುದು 
ನೋಡಾಗ ನನ್ನೀ ಬದುಕ..!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಜೀವಶಾಸ್ತ್ರವ
ಜೀವಂತಗೊಳಿಸಿ
ಪರಿಸರ ಜ್ಞಾನವ ನಮಗೆ 
ಪಸರಿಸಿ ......

ಅಂಧಕಾರದ 
ಅಜ್ಞಾನವ ತೊಲಗಿಸಿ 
ಬೆರಳಡಿಯಲ್ಲಿ
ಭವ್ಯ ಭವಿಷ್ಯವ ರೂಪಿಸಿ 

ನೀವಾದಿರಿ ಕನ್ನಡದ ಗೌರಿ 
ಕೊಡಗಿನ ಕುವರಿ 
ಸೌಂದರ್ಯ ಲಹರಿ
ಸೋಜಿಗದ ಸಿರಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಕನಸ್ಸಿನ ಬೆನ್ನ ಹಿಡಿದು 
ಮನಸ್ಸಿನ ಕನ್ನಡಿ ಹೊಡೆದು 
ಸಾಗಿ ಬಂದ ನಿನ್ನ 
ಸಾಧನೀಯ ಹಾದಿ ಇತರರಿಗೆ 
ಮಾರ್ಗದರ್ಶನದಂತಿರಲಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಎಲ್ಲರಂತಿಲ್ಲ ನನ್ನ ಬದುಕು 
ಎನ್ನುವುದೇ ಈಗ 
ಎಚ್ಚರಿಕೆ ಗಂಟೆ ನನ್ನ ಪಾಲಿಗೆ 
ನಾ ಸಾಗಲು ಗುರಿಯ ಕಡೆಗೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಕಟ್ಟಿಟ್ಟು ಬಿಡು 
ಹುಕ್ಕೇರಿ ನರ್ತಿಸುತ್ತಿರುವ 
ಭಾವನೆಗಳನ್ನ ..

ಎಚ್ಚರಿಕೆ ;
ನನಸಾಗದ ಸಾವಿರಾರು 
ಕನಸುಗಳಿವೆ ಇನ್ನ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
loader
Home
Explore
Events
Notification
Profile