Nojoto: Largest Storytelling Platform

White ಒಂದು ದಿನಕ್ಕೆ ಸೀಮಿತವಾಗಿರುವ  ಏಳು ಬಣ್ಣಗಳ ಎರಚುತ

White ಒಂದು ದಿನಕ್ಕೆ ಸೀಮಿತವಾಗಿರುವ 

ಏಳು ಬಣ್ಣಗಳ ಎರಚುತ

ಮಾಸಿ ಹೋಗುವ ಬಣ್ಣ ಆಡುವ 

ಅವಶ್ಯಕತೆ ನನಗಿಲ್ಲ ಸಂಗಾತಿ...

ಪ್ರತಿಕ್ಷಣ ನನ್ನೊಂದಿಗಿದ್ದು.....

ನನ್ನೀಡಿ ಜೀವನವನ್ನೇ ರಂಗಾಗಿಸಿದೆ 

ಯೋಚನೆಗಳಿಗೆ ಗುಲಾಬಿ 

ಬಣ್ಣವೆರಚಿ ತಿಳಿಯಾಗಿಸಿದೆ....

ಭಾವನೆಗಳಿಗೆ ಕೆಂಪು ಬಣ್ಣ ತುಂಬಿದೆ, 

ಸ್ಪೂರ್ತಿಗೆ ಕೇಸರಿ ಬಣ್ಣ ಹಾಕಿದೆ,

ಅಂತರಂಗವನು ಬಿಳಿ ಹಾಳೆಯಾಗಿಸಿದೆ,

ಹೃದಯ ಹಸಿರಾಗಿಸಿದೆ,

ಮನಸೆಲ್ಲಾ ತಿಳಿ ಆಗಸದಂತೆ 

ವಿಶಾಲವಾಗಿಸಿದೆ...

ನನ್ನ ಸಾಧನೆಗೆ ಜೊತೆಯಾಗಿ ನಿಂತು 

ಬದುಕನೆಲ್ಲ ಹಳದಿ  ಬಣ್ಣವಾಗಿಸಿದೆ...

ಅದಕ್ಕಾಗಿ ನನಗೆ ಇನ್ನಾವ ಬಣ್ಣ

ವಸ್ತ್ರ ಒಡವೆಗಳ ಬಯಕೆ ಇಲ್ಲ......

                            ನನ್ನ ಬಾಳ ಸಂಗಾತಿಗಾಗಿ 

                              ಪಾರ್ವತಿ ಎಸ್.ಕಂಬಳಿ

©PARVATI KAMBLI #love_shayari
White ಒಂದು ದಿನಕ್ಕೆ ಸೀಮಿತವಾಗಿರುವ 

ಏಳು ಬಣ್ಣಗಳ ಎರಚುತ

ಮಾಸಿ ಹೋಗುವ ಬಣ್ಣ ಆಡುವ 

ಅವಶ್ಯಕತೆ ನನಗಿಲ್ಲ ಸಂಗಾತಿ...

ಪ್ರತಿಕ್ಷಣ ನನ್ನೊಂದಿಗಿದ್ದು.....

ನನ್ನೀಡಿ ಜೀವನವನ್ನೇ ರಂಗಾಗಿಸಿದೆ 

ಯೋಚನೆಗಳಿಗೆ ಗುಲಾಬಿ 

ಬಣ್ಣವೆರಚಿ ತಿಳಿಯಾಗಿಸಿದೆ....

ಭಾವನೆಗಳಿಗೆ ಕೆಂಪು ಬಣ್ಣ ತುಂಬಿದೆ, 

ಸ್ಪೂರ್ತಿಗೆ ಕೇಸರಿ ಬಣ್ಣ ಹಾಕಿದೆ,

ಅಂತರಂಗವನು ಬಿಳಿ ಹಾಳೆಯಾಗಿಸಿದೆ,

ಹೃದಯ ಹಸಿರಾಗಿಸಿದೆ,

ಮನಸೆಲ್ಲಾ ತಿಳಿ ಆಗಸದಂತೆ 

ವಿಶಾಲವಾಗಿಸಿದೆ...

ನನ್ನ ಸಾಧನೆಗೆ ಜೊತೆಯಾಗಿ ನಿಂತು 

ಬದುಕನೆಲ್ಲ ಹಳದಿ  ಬಣ್ಣವಾಗಿಸಿದೆ...

ಅದಕ್ಕಾಗಿ ನನಗೆ ಇನ್ನಾವ ಬಣ್ಣ

ವಸ್ತ್ರ ಒಡವೆಗಳ ಬಯಕೆ ಇಲ್ಲ......

                            ನನ್ನ ಬಾಳ ಸಂಗಾತಿಗಾಗಿ 

                              ಪಾರ್ವತಿ ಎಸ್.ಕಂಬಳಿ

©PARVATI KAMBLI #love_shayari