ಜೀವ ಭಾವ ಎಲ್ಲವೂ ನಿನ್ನದೇ ಬದುಕೇ ಈ ಮನಸು ನಿನದಲ್ಲವೇ ಈ ಮನಸು ಮನಸೊಳಗಿಲ್ಲದಿರೆ ಈ ಬದುಕು ಯಾರಿಗಾಗಿ ಹೇಳು ಮನಸಿದ್ದರೃ ಬದುಕಲ್ಲವೇ ಈ ಮನಸು ನಿನ ಬದುಕಲ್ಲಿ ಬೆರೆತಿಲ್ಲವೇ ನಿನ ಒಂದು ಭಾಷೆಯಲ್ಲೇ ಈ ಜೀವ ಬದುಕುಳಿದಿದೆ ನಿನ ಹೆಸರಲ್ಲೇ ಈ ಬಾಳಿನ ಆಳವಿದೆ ಅದಕೇಂದೇ ಸಾಗಿದೆ ಈ ಪಯಣ ನೋವಿಲ್ಲದ ಸಿಹಿಯಾದ ಮೌನಗೀತೆಯಾಗಿ ಈ ಹೃದಯ ನಿನ್ನೊಳು ಈ ತನು ನಿನಗಾಗಿ ಮುಡಿಪಾಗಿದೆ ಮುಂದಿನ ಬದುಕು ಕಾದಿದೆ ಮಡಿಲಲಿ ಮಡಿಯಲು ತಡ ಮಾಡದೇ ಬರಲಾರೆಯಾ ಆ ಭವ್ಯ ಮಧುರ ನಿಮಿಷಕೆ ತಿರುವುಗಳು ತಿರುವಿ ಹಾಕುತಿವೆ ನಿನ್ನ ಸವಿ ಮಾತಿನ ಪ್ರೀತಿಯ ಅಮೃತ ನೀಡಿದ ಕ್ಷಣಗಳನು ನೆನೆದಿದೆ ಮನಸು ನೆನಪುಗಳ ಬಾಚಿ ತಬ್ಬಲು ಜೀವವೇ ಕಾದಿದೆ ಜೀವದ ಮಿಲನಕೆ ಈ ಜೀವವೂ ನಿನದಲ್ಲವೇ.... ಪಾರ್ವತಿ ಕಂಬಳಿ ಹುಬ್ಬಳ್ಳಿ.
PARVATI KAMBLI
PARVATI KAMBLI
PARVATI KAMBLI