ನಿನ್ನೊಲುಮೆಯ ತಂಗಾಳಿ ಬೀಸಿದೆ ಮನದಲಿ ಸುರಿಯುತಿದೆ ಬೋರ್ಗರೆದು ಒಲುಮೆಯ ಸವಿನೆನಪ ಕಾಲದ ಸುಳಿಯಲಿ ನನ್ನ ನೀ ಮರೆತರೂ ಬೆಂಬಿಡದೆ ಕಾಡುತಿದೆ ಮನವ.... ನೀ ನನ್ನೊಡನಿದ್ದ ವರುಷಗಳು ಕ್ಷಣದಂತೆ ಜಾರಿದವು ನೀನಿರದ ದಿನಗಳು ಯುಗದಂತೆ ಕಾಡುತಿವೆ ಸಾಗರದ ಅಲೆಅಲೆಯು ಅರಸುತಿವೆ ನಿನ್ನ ನೋಟವ ಮುನಿಸಿದೆ ಅಂದದ ಗೆಳತಿಯ ಸ್ಪರ್ಷವ ಬಯಸಿ ಮನ್ನಿಸದೆ ನಿನ್ನೊಲುಮೆಯ ಅಲೆಯೊಂದು ಮೂಡಿದೆ ನನ್ನೊಡಲ ಕಡಲನ್ನು ಕೆದಕಿ ದೂರಾದ ಮನವ ದೂರಿನ ಕಾರಣ ಕೇಳುತಿದೆ.... #ಕನ್ನಡ #ಕನ್ನಡ_ಬರಹಗಳು #yqjogikannada #yqjogi_feelings #yqmandya #yqjogilove