Nojoto: Largest Storytelling Platform

ನಿನ್ನೊಲುಮೆಯ ತಂಗಾಳಿ ಬೀಸಿದೆ ಮನದಲಿ ಸುರಿಯುತಿದೆ ಬೋರ್ಗರೆ

ನಿನ್ನೊಲುಮೆಯ ತಂಗಾಳಿ
ಬೀಸಿದೆ ಮನದಲಿ
ಸುರಿಯುತಿದೆ ಬೋರ್ಗರೆದು
ಒಲುಮೆಯ ಸವಿನೆನಪ
ಕಾಲದ ಸುಳಿಯಲಿ
ನನ್ನ ನೀ ಮರೆತರೂ
ಬೆಂಬಿಡದೆ ಕಾಡುತಿದೆ ಮನವ....

ನೀ ನನ್ನೊಡನಿದ್ದ ವರುಷಗಳು
ಕ್ಷಣದಂತೆ ಜಾರಿದವು
ನೀನಿರದ ದಿನಗಳು 
ಯುಗದಂತೆ ಕಾಡುತಿವೆ

ಸಾಗರದ ಅಲೆಅಲೆಯು
ಅರಸುತಿವೆ ನಿನ್ನ 
ನೋಟವ ಮುನಿಸಿದೆ
ಅಂದದ ಗೆಳತಿಯ ಸ್ಪರ್ಷವ 
ಬಯಸಿ ಮನ್ನಿಸದೆ 

ನಿನ್ನೊಲುಮೆಯ 
ಅಲೆಯೊಂದು ಮೂಡಿದೆ
ನನ್ನೊಡಲ ಕಡಲನ್ನು ಕೆದಕಿ
ದೂರಾದ ಮನವ ದೂರಿನ 
ಕಾರಣ ಕೇಳುತಿದೆ.... #ಕನ್ನಡ #ಕನ್ನಡ_ಬರಹಗಳು #yqjogikannada #yqjogi_feelings #yqmandya #yqjogilove
ನಿನ್ನೊಲುಮೆಯ ತಂಗಾಳಿ
ಬೀಸಿದೆ ಮನದಲಿ
ಸುರಿಯುತಿದೆ ಬೋರ್ಗರೆದು
ಒಲುಮೆಯ ಸವಿನೆನಪ
ಕಾಲದ ಸುಳಿಯಲಿ
ನನ್ನ ನೀ ಮರೆತರೂ
ಬೆಂಬಿಡದೆ ಕಾಡುತಿದೆ ಮನವ....

ನೀ ನನ್ನೊಡನಿದ್ದ ವರುಷಗಳು
ಕ್ಷಣದಂತೆ ಜಾರಿದವು
ನೀನಿರದ ದಿನಗಳು 
ಯುಗದಂತೆ ಕಾಡುತಿವೆ

ಸಾಗರದ ಅಲೆಅಲೆಯು
ಅರಸುತಿವೆ ನಿನ್ನ 
ನೋಟವ ಮುನಿಸಿದೆ
ಅಂದದ ಗೆಳತಿಯ ಸ್ಪರ್ಷವ 
ಬಯಸಿ ಮನ್ನಿಸದೆ 

ನಿನ್ನೊಲುಮೆಯ 
ಅಲೆಯೊಂದು ಮೂಡಿದೆ
ನನ್ನೊಡಲ ಕಡಲನ್ನು ಕೆದಕಿ
ದೂರಾದ ಮನವ ದೂರಿನ 
ಕಾರಣ ಕೇಳುತಿದೆ.... #ಕನ್ನಡ #ಕನ್ನಡ_ಬರಹಗಳು #yqjogikannada #yqjogi_feelings #yqmandya #yqjogilove
divakard3020

DIVAKAR D

New Creator