ಕುಡಿತಕ್ಕೆ ಬಲಿಯಾದವರ ನೆತ್ತರು ಬಸಿದು ಜೀವ ಕಸಿದಾದರೂ ಗಳಿಸಬೇಕು ಆದಾಯ ಆಳುವವರಿಗೆ ಸರ್ಕಾರ ಕೊಡಬೇಡವೇ ಹವಾನಿಯಂತ್ರಿತ ಕೊಠಡಿಯಲ್ಲಿ ಐಷಾರಾಮಿ ಲಕ್ಷೋಪಲಕ್ಷ ಸಂಬಳದ ಜೊತೆಗೆ ಅಲ್ಲಲ್ಲಿ ಸುರಿವ ಸೋನೆ ಮಳೆಯಂತೆ ಲಂಚ ಪೀಕುವ ರಕ್ತ ಹೀರುವ ಆಧುನಿಕ ರಕ್ಕಸರಿಗೆ,ಹಣವಿಲ್ಲವಂತೆ ಜೀವನ ನೂಕಲು ಖರ್ಚಿಗೆ ಕಛೇರಿಗೆ ಬೀಗ ಬಿದ್ದಿದೆ ಕೋಟ್ಯಂತರ ಹಣ ಬಸಿದು ಅಳಿದುಳಿದ ಪೈಸೆಯಲ್ಲಿ ಉಚಿತ ಕೊಳೆತ ಅಕ್ಕಿ ಬೇಳೆ ನೀಡಿ ಕರ್ಣಾಸುರನೆಂದು ಬಿರುದು ಪಡೆವ ಇರಾದೆ ಇದೆಯಂತೆ ಇವರಿಗೂ ಕುಡಿತದ ಚಟಕ್ಕೆ ಹುಚ್ಚರಾಗುವ ಜನರಿರುವವರೆಗೂ ಬಲಿಯಾಗಿ ಚಟ್ಟವೇರಿ ಅಳುತ್ತಿರುವ ದಿಕ್ಕೆ ಕಾಣದ ಜನರಿಗೆ ತೋರಿಸುತ್ತಾರಂತೆ ಹೊಸ ಹಾದಿ ಮಸಣಕ್ಕೆ ಕಳಿಸಿ ಮೊಸಳೆ ಕಂಬನಿ ಸುರಿಸಿ ಬುದ್ಧಿಜೀವಿಗಳಂತೆ... ಕುಡಿತದಿಂದ ಆದಾಯ #ಕುಡಿತ #ಆದಾಯ #ಸರ್ಕಾರ #ರಾಜಕಾರಣಿ #yqdvkrddots