ಶಿವನ ಮನ ಗೆದ್ದಿರುವೆ ನಿಸರ್ಗದ ಮಡಿಲಲ್ಲಿ ಮಗುವಾಗಿರುವೆ ಜೀವನದ ರಸಾನುಭವ ಸವಿದಿರುವೆ ಏಳು ಬೀಳುಗಳ ದಾಟಿ ಬಂದಿರುವೆ ಅರುಣೋದಯದ ಕಿರಣಗಳ ಸ್ಪರ್ಶವಾಗಿದೆ ಅಂತರಾಳದಲ್ಲಿ ಬೆಳಕೊಂದು ಪ್ರಜ್ವಲಿಸಿದೆ ದೇವರಾಟದಲಿ ಧುಮುಕಿ ಈಜುವುದ ಕಲಿತೆ ದೈವ ನೀಡಿದ ಪರೀಕ್ಷೆಯಲ್ಲಿ ಪಾಸಾದೆ ನೊಂದು ಬೆಂದು ಬಳಲಿದಕೆ ಕಲ್ಲಾಗಿರುವೆ ಅವಮಾನಗಳ ಜ್ವಾಲಾಮುಖಿ ಧಹಿಸಲಿಲ್ಲ ಆ ಶಿವನಿಟ್ಟ ಸವಾಲುಗಳ ಎದುರಿಸಿ ಮನವನ್ನು ಪವಿತ್ರ ಭಾವಗಳಲ್ಲಿ ಇರಿಸಿ ಸಹನೆಯ ಸಹವಾಸದಲ್ಲಿ ಮಿಂದೇಳಿಸಿ ಕರುಣೆ ಪ್ರೀತಿ ಮಮತೆಗಳ ಜೀವಾಳವಾಗಿಸಿ ಪ್ರಾಮಾಣಿಕವಾಗಿ ದೈವದಾಣತಿಯ ಪೂರೈಸಿ ಶಿಲ್ಪಕಾರನ ಕೈಚಳಕದಲಿ ಮೂರ್ತಿಯಾಗಿ ಬಂಧುದನ್ನೆಲ್ಲವ ಬರಲೆಂದು ಸ್ವೀಕರಿಸಿ ಅದ್ಭುತ ಕೊಡುಗೆಯ ಮನಸಾರೆ ಅಹ್ವಾನಿಸಿ ಕಹಿ ನೆನಪ ಅಳಿಸಿ ಸವಿ ನೆನಪ ಅನುಭವಿಸಿದೆ... ಪಾರ್ವತಿ ಎಸ್.ಕಂಬಳಿ ©PARVATI KAMBLI #RAMADAAN