ಕಾಡಿ ಬೇಡಿಯಾದರೂ ತೆರೆಯಿಸಿದರು ಕನಸು ನನಸಾದಂತೆ ಕುಣಿದು ಕುಪ್ಫಳಿಸಿದರು ಮದ್ಯದಂಗಡಿಯ ಓಣಿಯಲಿ ಓಡೋಡಿ ಒಟ್ಟಾಗಿ ಮೈಲುಗಟ್ಟಲೆ ಶಿಸ್ತಾಗಿ ಸುಸ್ತಾಗಿ ಸಾಮಾಜಿಕ ಅಂತರವ ಅರಿತು ಸಾಲಾಗಿ ಕಾಯ್ದು ಬಳಲಿ ಬಾಯಾರಿ ಮದಿರೆಯನ್ನು ಹೊಟ್ಟೆಗಿಳಿಸಿಕೊಂಡು ಒದ್ದಾಡಿ ನರ್ತಕಿಯೇ ನಾಚಿಸುವಂತೆ ನಾಟ್ಯದಿ ಮೈ ಮರೆತು ನಾಳಿನ ಭವಿಷ್ಯದ ಆದಾಯದ ಪರಿಹಾರ ನಿಧಿಗೆ ನಾಮಾಂಕಿತ ಮಾಡಲು ಆಗ್ರಹವಿಟ್ಟು ಸುರಪಾನದಿ ಬಿದ್ದು ಮೇಲೆದ್ದರು ಮಂದಿರ ಮಸೀದಿ ಚರ್ಚ್ ಗಳಲ್ಲಿ ಭಗವಂತನ ದರುಶನಕ್ಕೆಂದು ಗಂಟೆಗಟ್ಟಲೆ ಕಾಯ್ದವರನ್ನು ನೋಡಿ ಕಂಗಳ ಕಣ್ದುಂಬಿ ಆನಂದಿಸಿದ್ದೆವು ಇಂದಾಯ್ತು ಕುಡುಕರಿಗೆ ವೈಬೋಗದ ದರ್ಶನ ಸೋಜಿಗವಲ್ಲವೇ ಇದುವೇ ಸುರಪಾನದ ಸರತಿ ಸಾಲಲ್ಲಿ ಕಿಚ್ಚು ಹಚ್ಚಲು ಸುಂದರಿಯರೆ ಹೆಚ್ಚಿ ಮಾನಿನಿಗೂ ಮದಿರೆಗೆ ಸಂಬಂಧವೆಂದರು ಅಲ್ಲಿ ಇಲ್ಲಿ ನಡೆಯುತ್ತಿತ್ತು ಸುರಪಾನದ ಸಭೆ ಕದ್ದು ಮುಚ್ಚಿ ಕಣ್ತೆರೆಸಿದರೀಗ ನಾವು ಯಾರಿಗೂ ಕಡಿಮೆಯಿಲ್ಲವೆಂದು ಬೇಡಿಕೆ ಕೊಟ್ಟರೂ ಕೊಡ ಬಹುದು ಮಹಿಳೆಯರಿಗಾಗಿಯೆ ಮದುಪಾನದ ಸುಲಭ ಸೌಲಭ್ಯಗಳನ್ನು ಒದಗಿಸಿ ಕಿರುಕಾಣಿಕೆ ಆದಾಯಕ್ಕೆ ನೀಡುತ್ತೇವೆಂದು ಮೊರೆ ಇಟ್ಟರು... ಸುರಪಾನದ ಸರತಿ ಸಾಲು ನೋಡಿದಾಗ ಮೂಡಿದ್ದು.. #ಸುರಪಾನ #ಮದ್ಯಪಾನ #ಆದಾಯ #ಸರ್ಕಾರ #yqdvkrddots