ನೀನಿರದ ನಿನ್ನ ಸವಿಮಾತಿರದ ದಿನ ಯುಗವಾಗುತ್ತಿತ್ತೊದೊಂದು ಕ್ಷಣ ನಿನಗಾಗಿ ಬೇಡದ ದೇವರಿಗೆ ಹರಕೆ ಹೊತ್ತೆ ಹಸನಾಗಲೊ ಬಾಳು ನನ್ನೊಲುಮೆ ಗೆದೆಂದು ನಿನ್ನ ಸವಿನಗುವಿಗಾಗಿ ನನ್ನನ್ನೆ ನಾನು ಮರೆತೆ ಅಣಕಿಸಿದರೂ ನಿನ್ನದೆ ಎದುರಿಗೆ ಜಗದೆದರೂ ನಾ ಮೂಕನಾದೆ... ನುಡಿಗಳುದುರಿದವು ಮುತ್ತಿನಂತೆ ಮಾತುಗಳೆ ವೇದವಾದವು ನಮ್ಮೆದುರಿಗೆ ನಿನ್ನದೆ ಕಣ್ಣೀರಿನ ಕಥೆಗೆ ತಡೆಗೋಡೆ ನಿರ್ಮಿಸಲು... ಕಾಲಚಕ್ರದಲಿ ಕಾಲನು ಉರುಳಿಸಿದ ದಾಳಕೆ ಬಲಿಯಾಯಿತೇನು ಹಸನಾದ ನೇಹ ಅಂತರಂಗದ ಆಂತರ್ಯದಲಿ ನೀ ತುಂಬಿದ ಕೆಚ್ಚಿಗೆ ಬದುಕಬಲ್ಲೆ ಜಗದೆದರೂ ಯಾರೇ ಇಲ್ಲದಿದ್ದರೂ... #ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada