ಎಂದಿಗೂ ಮಾಸದು ನಿನ್ನ ನೆನಪಿನ ಹಚ್ಚೊತ್ತಿಗೆ, ದಣಿದ ಕಣ್ಗಳಿಗೆ ನಿನ್ನ ಸೌಂದರ್ಯವೇ ಅರವಟ್ಟಿಗೆ, ಏನು ಹೇಳದೆ ಸುಮ್ಮನೆ ಇರುವ ಈ ಸೋಮಾರಿ ಹೊತ್ತಿಗೆ! ಮಾತನಾಡಲೇ ಬೇಡ ನೀಡು ಪ್ರೀತಿಯ ಗುತ್ತಿಗೆ! ಮನದಾಳದಿ ಸದಾ ನಿನ್ನ ನೆನಪುಗಳ ಅಪ್ಪುಗೆ, ದಿನ ದಿನವೂ ಹೆಚ್ಚುತ್ತಿದೆ ಈ ಕನಸಿನ ಬಾಡಿಗೆ, ಕನಿಕರಿಸಿ ಒಮ್ಮೆಯಾದರೂ ನೀ ನೀಡು ಮೆಚ್ಚುಗೆ, ಆಮಂತ್ರಿಸುವೆ ನಿನಗಾಗಿ ಕಾದಿದೆ ಒಲವಿನ ಗದ್ದುಗೆ!!! ©Kushal Shetty Koushik #kkwrites #boat