Nojoto: Largest Storytelling Platform

ಕಾಣಿಸದೇ ಹಿಂಬಾಲಿಸುವವ, ಕಷ್ಟ ನಷ್ಟಗಳಿಂದ ಮುಕ್ತನಾಗಿಸಿ ಕೈ

ಕಾಣಿಸದೇ ಹಿಂಬಾಲಿಸುವವ,
ಕಷ್ಟ ನಷ್ಟಗಳಿಂದ ಮುಕ್ತನಾಗಿಸಿ
ಕೈಹಿಡಿದು ಕರೆದೊಯ್ಯುವ
ಅವನು ಜಗದ ಗೆಳೆಯ.

ಮೇಲುಕೀಳೆಂಬ ಭೇದವಿಲ್ಲದವ,
ಅಸಹಾಯತೆಗೂ, ಅಸಹನೆಗೂ
ಅಪ್ಪುಗೆಯಲಿ ಉತ್ತರಿಸುವ
ಅವನು ಜಗದ ಗೆಳೆಯ.

ಬೈಗುಳಕೆ ಬೇಸರಿಸದವ,
ಭ್ರಮೆಯ ಬದುಕಿಗೆ ಅಂತ್ಯ ಹಾಡಿ
ಬರಿಗೈಯ್ಯಲ್ಲಿ ಕರೆದೊಯ್ಯುವ
ಅವನು ಜಗದ ಗೆಳೆಯ.
#ಮರಣ
ಕಾಣಿಸದೇ ಹಿಂಬಾಲಿಸುವವ,
ಕಷ್ಟ ನಷ್ಟಗಳಿಂದ ಮುಕ್ತನಾಗಿಸಿ
ಕೈಹಿಡಿದು ಕರೆದೊಯ್ಯುವ
ಅವನು ಜಗದ ಗೆಳೆಯ.

ಮೇಲುಕೀಳೆಂಬ ಭೇದವಿಲ್ಲದವ,
ಅಸಹಾಯತೆಗೂ, ಅಸಹನೆಗೂ
ಅಪ್ಪುಗೆಯಲಿ ಉತ್ತರಿಸುವ
ಅವನು ಜಗದ ಗೆಳೆಯ.

ಬೈಗುಳಕೆ ಬೇಸರಿಸದವ,
ಭ್ರಮೆಯ ಬದುಕಿಗೆ ಅಂತ್ಯ ಹಾಡಿ
ಬರಿಗೈಯ್ಯಲ್ಲಿ ಕರೆದೊಯ್ಯುವ
ಅವನು ಜಗದ ಗೆಳೆಯ.
#ಮರಣ