Nojoto: Largest Storytelling Platform

ಅಂಧಕಾರವಾ ಅಳಿಸಿ ಅಕ್ಷರದ ಹಣತೆಯಿಂದ ಜ್ಞಾನಜ್ಯೋತಿಯ ಬೆಳಗಿಸ

ಅಂಧಕಾರವಾ ಅಳಿಸಿ
ಅಕ್ಷರದ ಹಣತೆಯಿಂದ
ಜ್ಞಾನಜ್ಯೋತಿಯ ಬೆಳಗಿಸಿ
ಮಕ್ಕಳಂತೆ ಪ್ರೀತಿಸಿದಿರಿ
ಮೌಲ್ಯ ಬೆಳೆಸಿದಿರಿ
ಕಣ್ಣಿಗೆ ಕಾಣುವ ದೇವತೆಗಳು
 "ನಮ್ಮ ಶಿಕ್ಷಕರು"🙏

ನಿಮ್ಮಿಂದಲೇ ನಾವು ನೀವಿರದೆ
ನಾವಾಗುತ್ತಿರಲಿಲ್ಲ ನಾಗರಿಕರು
ಕಲ್ಲನ್ನು ಕೆತ್ತಿ ಶಿಲ್ಪವಾಗಿಸುವಂತೆ
ಮಣ್ಣಿನಿಂದ ಸುಂದರ ಮೂರ್ತಿಯಾಗಿಸುವಂತೆ
ಭವಿಷ್ಯ ಬೆಳಗಿಸಿದ ಭಗವಂತರು
"ನಮ್ಮ ಶಿಕ್ಷಕರು"🙏



ಪ್ರತಿ ತರಗತಿಯಲ್ಲೂ 
ನಮ್ಮನ್ನು ಪರಿಪಕ್ವವಾಗಿಸುವ ಪ್ರಯತ್ನದಲ್ಲೇ
ನಿಮ್ಮ ವೃತ್ತಿ, ಪ್ರವೃತ್ತಿಯಲಿ ಪರಿತಪಿಸಿ
ನಿಮ್ಮ ವೃತ್ತಿ ಜೀವನ ಸವೆಸುವಿರಿ ಬೆಲೆಕಟ್ಟಲಾಗದ ಮುತ್ತು ರತ್ನಗಳು
 "ನಮ್ಮ ಶಿಕ್ಷಕರು"🙏

ಇರಲಾರದು ಯಾವುದೇ ಕ್ಷೇತ್ರ,
ಯಾವುದೇ ಕೆಲಸ ಗುರುಗಳ
ಅರಿವಿನ ಬೆಳಕಿರದೆ...
ಖಾಲಿ ಬಿಳಿ ಹಾಳೆಯಂತ ನಮ್ಮ ಬದುಕಲ್ಲಿ ಬಣ್ಣದ ಚಿತ್ರ ಮೂಡಿಸಿ
ಬದುಕ ರೂಪಿಸಿ ಬಾಳಿಗೊಂದು ಅರ್ಥ ನೀಡುದಿರಿ..

ನನ್ನೆಲ್ಲಾ ಗುರುವೃಂದಕ್ಕೆ ಅನಂತ ಅನಂತ ವಂದನೆಗಳು 🙏🙏
       -shru 
 Happy teacher's day in advance
ಅಂಧಕಾರವಾ ಅಳಿಸಿ
ಅಕ್ಷರದ ಹಣತೆಯಿಂದ
ಜ್ಞಾನಜ್ಯೋತಿಯ ಬೆಳಗಿಸಿ
ಮಕ್ಕಳಂತೆ ಪ್ರೀತಿಸಿದಿರಿ
ಮೌಲ್ಯ ಬೆಳೆಸಿದಿರಿ
ಕಣ್ಣಿಗೆ ಕಾಣುವ ದೇವತೆಗಳು
 "ನಮ್ಮ ಶಿಕ್ಷಕರು"🙏

ನಿಮ್ಮಿಂದಲೇ ನಾವು ನೀವಿರದೆ
ನಾವಾಗುತ್ತಿರಲಿಲ್ಲ ನಾಗರಿಕರು
ಕಲ್ಲನ್ನು ಕೆತ್ತಿ ಶಿಲ್ಪವಾಗಿಸುವಂತೆ
ಮಣ್ಣಿನಿಂದ ಸುಂದರ ಮೂರ್ತಿಯಾಗಿಸುವಂತೆ
ಭವಿಷ್ಯ ಬೆಳಗಿಸಿದ ಭಗವಂತರು
"ನಮ್ಮ ಶಿಕ್ಷಕರು"🙏



ಪ್ರತಿ ತರಗತಿಯಲ್ಲೂ 
ನಮ್ಮನ್ನು ಪರಿಪಕ್ವವಾಗಿಸುವ ಪ್ರಯತ್ನದಲ್ಲೇ
ನಿಮ್ಮ ವೃತ್ತಿ, ಪ್ರವೃತ್ತಿಯಲಿ ಪರಿತಪಿಸಿ
ನಿಮ್ಮ ವೃತ್ತಿ ಜೀವನ ಸವೆಸುವಿರಿ ಬೆಲೆಕಟ್ಟಲಾಗದ ಮುತ್ತು ರತ್ನಗಳು
 "ನಮ್ಮ ಶಿಕ್ಷಕರು"🙏

ಇರಲಾರದು ಯಾವುದೇ ಕ್ಷೇತ್ರ,
ಯಾವುದೇ ಕೆಲಸ ಗುರುಗಳ
ಅರಿವಿನ ಬೆಳಕಿರದೆ...
ಖಾಲಿ ಬಿಳಿ ಹಾಳೆಯಂತ ನಮ್ಮ ಬದುಕಲ್ಲಿ ಬಣ್ಣದ ಚಿತ್ರ ಮೂಡಿಸಿ
ಬದುಕ ರೂಪಿಸಿ ಬಾಳಿಗೊಂದು ಅರ್ಥ ನೀಡುದಿರಿ..

ನನ್ನೆಲ್ಲಾ ಗುರುವೃಂದಕ್ಕೆ ಅನಂತ ಅನಂತ ವಂದನೆಗಳು 🙏🙏
       -shru 
 Happy teacher's day in advance
shruthishru7992

Shruthi Shru

New Creator