Nojoto: Largest Storytelling Platform
shruthishru7992
  • 97Stories
  • 1Followers
  • 0Love
    0Views

Shruthi Shru

  • Popular
  • Latest
  • Video
d2f4e1d0f23c3f31b297710e4464e1ad

Shruthi Shru

All things.....
 At all time...
I'll trying to write
something sometime..
If it  iscorrect? if is it not...
Trying my level best....
  OPEN FOR COLLAB✨ #ATnoteasytowriteabout
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.

OPEN FOR COLLAB✨ #ATnoteasytowriteabout • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #writer #YourQuoteAndMine #yqaestheticthoughts #cinemagraphcollab

d2f4e1d0f23c3f31b297710e4464e1ad

Shruthi Shru

ಎಲ್ಲೋ ಹುಟ್ಟಿ..
ಎಲ್ಲೋ ಬೆಳೆದು..
ಇನ್ನೆಲ್ಲೋ ಜೀವನ ಕಂಡುಕೊಳ್ಳುವೆವು...

ಎಲ್ಲರಲೀ ಒಂದಾಗಿ ಬಾಳುವೆವು...
ಅಪರಿಚಿತ ಊರಲ್ಲಿ ಪರಿಚಿತರಾಗಿ ಬಂದು
ಬಿಡಿಸಲಾಗದ ಭಾಂಧವ್ಯದಲ್ಲಿ ಬಂಧಿಯಾಗಿ
ಬದುಕ ಕಟ್ಟಿಕೊಳ್ಳುವೆವು..

ಸ್ನೇಹಜೀವಿಯಾಗಿ ಸಾಗಬೇಕಿದೆ
ಹಸನ್ಮುಖಿಯಾಗಿ ನೋವ ಮರೆಯಬೇಕಿದೆ...
ಶಾಶ್ವತವಲ್ಲದ  ಈ ಜೀವನದಲ್ಲಿ...
 ಶಾಶ್ವತವಾಗುವಂತ ಸಿಹಿನೆನಪುಗಳ ಬಿಟ್ಟು ಹೋಗುವ ಪಯಣಿಗರಾಗೋಣ...


 ಜೀವನ ಪಯಣ

ಜೀವನ ಪಯಣ

d2f4e1d0f23c3f31b297710e4464e1ad

Shruthi Shru

ಉಪಮೇಯ  ಉಪಮಾನ
ರೂಪಕ ಉತ್ಪ್ರೇಕ್ಷೆ ರಗಳೆ ಛ0ಧಸ್ಸು
ತಿಲದಿಲ್ಲ ನನಗೆ ..
ಭವಿಷ್ಯಹ ತಿಳಿದಿದ್ದರೂ
ಸಾಲುತ್ತಿರಲಿಲ್ಲವೇನೋ
ಬಣ್ಣಿಸಲು ನಿನ್ನೊಲವ ಬಗೆ... ಒಲವು

ಒಲವು

d2f4e1d0f23c3f31b297710e4464e1ad

Shruthi Shru

ಹರಿಭಕ್ತಿಯಲಿ ಜಗ ಕಂಡು
ಹರಿದಾಸರಾಗಿ ಜೀವನ ಸವೆಸಿ 
ಕೀರ್ತನೆಗಳ ಹಾಡುತ 
ಭಕ್ತಿಯ ಬೆಳಗುತ.
ತತ್ವಪದಗಳಲ್ಲಿ ಬಾಳ ಅರಿವು ಮೂಡಿಸಿದ 
ದಾಸ ಶ್ರೇಷ್ಠರಾದ ಕನಕದಾಸರಿಗೆ 
ಕೋಟಿ ಕೋಟಿ ನಮನಗಳು 🙏🙏

 ಕನಕ ಜಯಂತಿ

ಕನಕ ಜಯಂತಿ

d2f4e1d0f23c3f31b297710e4464e1ad

Shruthi Shru

ಮರೆಯಲಾಗದ ಮಕ್ಕಳ ಚಿಲಿಪಿಲಿ ಕಲರವ..

ಒಮ್ಮೊಮ್ಮೆ ಓದುವರು 
ಓದಿದ್ದ ಬರೆವರು..
ಮತ್ತೆ ಮತ್ತೆ ಬರೆವರು , ತಪ್ಪಾಗಿದ್ದ ತಿದ್ದಿಕೊಳ್ಳುವರು 
ಬಾರದೆ ಇದ್ದದಕ್ಕೆ ಮಿಸ್ ಗದರಿದ್ದಕ್ಕೆ
ಬಿಕ್ಕಿ ಬಿಕ್ಕಿ ಅಳುವರು,
ಹಾಡನೊಂದು ಹೇಳಿಕೊಟ್ಟಾಗ 
ಮತ್ತೆ ಮತ್ತೆ ನಗುವರು..

ಆಟಕೆಂದು ಹೊರಗೆ ಬಿಟ್ಟಾಗ ಜಿಂಕೆಯಂತೆ ಜಿಗಿವರು..
ಸ್ನೇಹ ಬಳಗದಲ್ಲಿ ಅವರದೇ ಕಲರವ...
ಯಾವ ಗೋಳು ಗೊಡವೆಗಳಿರದೆ ವಿಹರಿಸುವ
ವಿಹಂಗಮ ನೋಟವದು...
ನೆಮ್ಮದಿಯ ತಾಣವದು  ಮುಗ್ದ ಮಕ್ಕಳ ಗೂಡಿದು... 

 ಮಕ್ಕಳ ಕಲರವ

ಮಕ್ಕಳ ಕಲರವ

d2f4e1d0f23c3f31b297710e4464e1ad

Shruthi Shru

ಭಗವಂತನ ಸ್ವರೂಪವೋ
ಮುಗ್ಧತೆಯ ಪ್ರತೀಕವೋ
ನಗುವಿನ ಸಾಕಾರ ಮೂರ್ತಿಯೋ
ನೋವಿಗೌಷದಿಯೋ..
ಅತ್ತರು ಅಂದವೊ..
ನಿನ್ನಳುವ ಸಹಿಸದ ಈ ತಾಯಿ ಮನವೋ...
ಸೃಷ್ಟಿಯಲಿಲ್ಲ ನಿನಗಿಂತ ಬೇರೆ ಚೆಂದವೋ..
ಜೀವವೇ ಈ ಮಗು..
ಎಂದಿಗೂ ನೀ ನಗು...
 ಮಗು ನಗು

ಮಗು ನಗು

d2f4e1d0f23c3f31b297710e4464e1ad

Shruthi Shru



ಮೋಡಗಳು ತೂಗುತಿತ್ತು...
ತಿಳಿಗಾಳಿಗೆ ಕಾಯುತಿತ್ತು...
ಮಳೆಹನಿಗಳು ಭುವಿ ತಾಗಲು
ಅದೇನೂ ತೊಡುಕೋ..
ಅದೇನು ತಡೆಯೊ...

ಕಂಬನಿಗಳು ಕಣ್ತುಂಬಿದಾಗ
ಕೆಲವೊಮ್ಮೆ ಹೀಗೆ...
ಕೆಳಗುರುಳಲು ಆಗದು...
ಒಳಗೊಳಗೇ ನೋವದು
..
ಒಮ್ಮೊಮ್ಮೆ ಖುಷಿಗೆ..
ಮಗದೊಮ್ಮೆ ಮುಗಿಯದ ದುಗುಡಕ್ಕೆ..

ಇಳೆಗೆ ಇಳಿಯಲು ಮಳೆಯು ಖುಷಿಯಿಂದ
ಕಾದು ಮೋಡ ಭಾರವಾಗಿ ಹೊಯ್ದಡುವಂತೆ..

ನಾವು ಸಹ ಖುಷಿಯಾಗೇ ಹೊರಡುವೆವು..
ಹೃದಯ ಭಾರವಾಗಿ ನಿಲ್ಲುವೆವು...
                -shru...

           -shru




 ಭಾರ..ಮೋಡ...ಮನದ ದುಗುಡ

ಭಾರ..ಮೋಡ...ಮನದ ದುಗುಡ

d2f4e1d0f23c3f31b297710e4464e1ad

Shruthi Shru

ಒಂಟಿತನವೆಂದು ಅನಿಸಿಲ,
ಸಂತಸವನ್ನು ಹಂಚಿಕೊಳ್ಳಲು
 ಎಂದಿಗೂ ಮರೆತಿಲ್ಲ
ನೀನಿತ್ತ ಸಾಂತ್ವನ ಎಂದಿಗು
ಮರೆಯಲಾಗದು,
ಯಾರಿಂದಲೂ ನೀಡಲಾಗದು 
ಪ್ರೀತಿಯ ಪ್ರವೃತ್ತಿಯಲ್ಲಿ
ಸದಾ ಸಾಥಿ ನೀ..ಅಭಿವ್ಯಕ್ತಿಯ ಗೆಳತಿ ನೀ

   ನನ್ನ ಲೇಖನಿ ✍️✍️✍️✍️....
   

 ಲೇಖನಿ...✍️

ಲೇಖನಿ...✍️

d2f4e1d0f23c3f31b297710e4464e1ad

Shruthi Shru

ಸಹೃದಯತೆ
ಸಹನಶೀಲತೆ
ಸಧೃಡತೆ
ಸ್ನೇಹಪರತೆ
ಸಹೋದರತೆ
ಸೃಜನಶೀಲತೆ
ಸಮಾಚಿತ್ತತೆ
ಸುಖಮಯ ಜೀವನದ
ಸೂತ್ರಗಳಾಗುವವವು
ಮೈಗುಡಿಸಿಕೊಂಡರೆ..
ಸುಲಭವಲ್ಲವದು
ಸಲೀಸಾಗಿ ಸಾಗದಿರಬಹುದು
ಆದರೆ
ಸಂಯಮದಿಂದ ಪರಿಪಾಲಿಸುವ
ಪ್ರಯತ್ನದ ಪಥ ನಮ್ಮದಾಗಿರಲಿ..
 ಸಾಗುವ ಹಾದಿಯಲ್ಲಿ

ಸಾಗುವ ಹಾದಿಯಲ್ಲಿ

d2f4e1d0f23c3f31b297710e4464e1ad

Shruthi Shru

ಸುಪ್ತವಾಗಿರಬೇಕು ಹೃದಯದ ಭಾರ  ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. 

#ನಿರ್ಧಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. #ನಿರ್ಧಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

loader
Home
Explore
Events
Notification
Profile