Nojoto: Largest Storytelling Platform

ಇಂದಿನ‌ ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನ

ಇಂದಿನ‌ ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು
 ಬಂಧುತ್ವವನ್ನು ಭಾಂಧವ್ಯಗಳನ್ನು ಸಾಮಾಜಿಕ‌ ಮಾದ್ಯಮಗಳಿಗೆ ಅಡ ಇಟ್ಟಿದ್ದೇವೆ. ಅಡವಿಟ್ಟ ಆಚರಣೆಗಳನ್ನು ಆಚರಿಸಿ ಮತ್ತೆ ಮುನ್ನಲೆಗೆ ಬರುವುದು ಮತ್ತೊಂದು ಅಡವಿಟ್ಟ ಆಚರಣೆ ಬಂದಾಗಲೇ...

FULL PIECE IN CAPTION... ಒಮ್ಮೆ ಓದಿಬಿಡಿ....
ಸಾಮಾಜಿಕ ಮಾದ್ಯಮಗಳಿಗೆ ಅಡವಿಟ್ಟ ಮನೋಭಾವನೆಗಳು...💐💐💐
#ದಿವಾಕರ್ #ಸಾಮಾಜಿಕ ಮಾದ್ಯಮಗಳಲ್ಲಿ #ಆಚರಣೆ ಗಳ #ಕಲರವ #ಕನ್ನಡ #yqjogi #yqthoughts #socialmedia ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಅಡ ಇಟ್ಟಿದ್ದೇವೆ. ತಂದೆ ತಾಯಿಗಳಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮುದ್ದು ಮುದ್ದಾಗಿ ಬೆಳೆಸಿದ ಮಕ್ಕಳು ಹಿರಿಯರನ್ನು ಸ್ವಲ್ಪವೂ ಕನಿಕರ ತೋರದೆ ತಮ್ಮ ಮೂಲಭೂತ ಕರ್ತವ್ಯವನ್ನು ಮರೆತವರು ಆಧುನಿಕತೆಯ ಹೆಸರಿನಲ್ಲಿ ಮುಗ್ದಜೀವಗಳನ್ನು ವೃದ್ದಾಶ್ರಮಕ್ಕೆ ಸೇರಿಸಿದವರು ಎರುವಲು ತಂದ ಹಳಸಲು Fathers Day, Mothers Day ದಿನ ಆಶ್ರಮಕ್ಕೆ ಹೋಗಿ ಹಣ್ಣು ಹಂಪಲುಗಳನ್ನು ಹಂಚಿ  ತರೇವಾರಿ ಪೋಟೋ ತಗೆದು ಸಾಮಾಜಿಕ ಮಾದ್ಯಮಗಳಲ್ಲಿ ಹರಿಯಬಿಡುತ್ತಾರೆ.  ಜೀವಾವಧಿ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾಗಿದ್ದ ಮಕ್ಕಳು ತಮ್ಮ ಜವಾಬ್ದಾರಿಯನ್ನು ಮರೆತು 
ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ Mothers Day ಮತ್ತು  Father's Day ಸಂಭ್ರಮದ ಆಚರಣೆಯೂ ಮುಗಿದು ಹೋಗುತ್ತದೆ. ಇದು ಮುಂಬುರುವ ದಿನದವರೆಗೆ ನೋಡಿಕೊಂಡು ಖುಷಿಹಂಚಿಕೊಳ್ಳುವ ಮನಗಳಿಗೆ ತಮ್ಮ ತಂದೆ ತಾಯಿ ಜ್ಞಾಪಕಕ್ಕೆ ಬರುವುದು ಮಗದೊಂದ ದಿನದಲ್ಲೇ. ಇದರಿಂದ ಸಮಾಜಕ್ಕೆ ಕೊಟ್ಟ ಸಂದೇಶವಾದರೂ ಏನು? ಇದರಿಂದ ಮುಂದಿನ ಪೀಳಿಗೆಯವರಿಗೆ ಕಲಿತದ್ದಾದರೂ ಏನು?

ಒಂದು ಕ್ಷಣವೂ ಮುಖ ಕೊಟ್ಟು ಮಾತನಾಡದ ಜೀವಗಳಿಗೆ ಸಾಮಾಜಿಕ ಮಾದ್ಯಮದಲ್ಲಿ ಅವರ ಹುಟ್ಟುಹಬ್ಬದ ದಿನ, ವಿವಾಹ ವಾರ್ಷಿಕೋತ್ಸವದ ದಿನ, ಇನ್ನು ಮುಂತಾದ ಸಂಧರ್ಭದಲ್ಲಿ ತುಂಬು ಹೃದಯದಿಂದ ಹಾರೈಕೆಯ ಸುರಿಮಳೆಯಾಗುತ್ತದೆ. ಅವರೊಂದಿಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಅವರ ವ್ಯಕ್ತಿತ್ವದ ಬಗ್ಗೆ ಈರ್ಷೆ, ಜಿಗುಪ್ಸೆಯಿದ್ದರೂ ಒಲ್ಲದ ಮನಸ್ಸಿನಿಂದ ಅವರಿಗೆ ಶುಭಕಾಮನೆಗಳನ್ನು ಹರಸುತ್ತೇವೆ. ಇಲ್ಲಿ ಅವರಿಗೆ ಶುಭಾಶಯ ಕೋರುವುದೇ ತಪ್ಪು ಅನ್ನುವ ಅಭಿಪ್ರಾಯವಲ್ಲ. ಆದರೆ ಎಷ್ಟು ಸಮಂಜಸ ಎಂಬುದು ಉತ್ತರವಿಲ್ಲದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. 
ಒಮ್ಮೆಯೂ ತನ್ನ ಸ್ನೇಹದ ಬಗ್ಗೆ ಹೆಮ್ಮೆಪಡೆದ ಗೆಳೆಯ ಗೆಳತಿಯರು ವರ್ಷಕ್ಕೊಮ್ಮೆ ಬರುವ Friendship Day ಹೆಸರಿನಲ್ಲಿ ಗೆಳತನದ ಮಹತ್ವ ಸಾರುವ ಉದ್ದುದ್ದ‌ ಉದ್ಘೋಷಣೆಗಳ ಉಸಾಬರಿಗೆ ಮಾರುಹೋಗುತ್ತಾರೆ. 
ಅವರ ಆಗುಹೋಗುಗಳಿಗೆ ಬೆನ್ನೆಲುಬಾಗಿ ನಿಂತು ಕಷ್ಟ ಸುಖಗಳಲ್ಲಿ ಸಮಪಾಲುದಾರರಾದ ಸ್ನೇಹಿತರು ಪ್ರತಿಕ್ಷಣವೂ ಅವರೊಂದಿಗೆ ಭಿನ್ನಾಭಿಪ್ರಾಯಗಳಿದ್ದರೂ ಆ ದಿನದಂದು ಮಾತ್ರ ಮತ್ತೆ ಹೂಮಳೆಯ ಸಂಭ್ರಮಮೇ. ಮತ್ತೆ ನೆನಪಿಗೆ ಬರುವುದು ಆ ದಿನವೇ ..

divakard3020

DIVAKAR D

New Creator

ಒಮ್ಮೆ ಓದಿಬಿಡಿ.... ಸಾಮಾಜಿಕ ಮಾದ್ಯಮಗಳಿಗೆ ಅಡವಿಟ್ಟ ಮನೋಭಾವನೆಗಳು...💐💐💐 #ದಿವಾಕರ್ #ಸಾಮಾಜಿಕ ಮಾದ್ಯಮಗಳಲ್ಲಿ #ಆಚರಣೆ ಗಳ #ಕಲರವ #ಕನ್ನಡ #yqjogi #yqthoughts #SocialMedia ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಅಡ ಇಟ್ಟಿದ್ದೇವೆ. ತಂದೆ ತಾಯಿಗಳಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮುದ್ದು ಮುದ್ದಾಗಿ ಬೆಳೆಸಿದ ಮಕ್ಕಳು ಹಿರಿಯರನ್ನು ಸ್ವಲ್ಪವೂ ಕನಿಕರ ತೋರದೆ ತಮ್ಮ ಮೂಲಭೂತ ಕರ್ತವ್ಯವನ್ನು ಮರೆತವರು ಆಧುನಿಕತೆಯ ಹೆಸರಿನಲ್ಲಿ ಮುಗ್ದಜೀವಗಳನ್ನು ವೃದ್ದಾಶ್ರಮಕ್ಕೆ ಸೇರಿಸಿದವರು ಎರುವಲು ತಂದ ಹಳಸಲು Fathers Day, Mothers Day ದಿನ ಆಶ್ರಮಕ್ಕೆ ಹೋಗಿ ಹಣ್ಣು ಹಂಪಲುಗಳನ್ನು ಹಂಚಿ ತರೇವಾರಿ ಪೋಟೋ ತಗೆದು ಸಾಮಾಜಿಕ ಮಾದ್ಯಮಗಳಲ್ಲಿ ಹರಿಯಬಿಡುತ್ತಾರೆ. ಜೀವಾವಧಿ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾಗಿದ್ದ ಮಕ್ಕಳು ತಮ್ಮ ಜವಾಬ್ದಾರಿಯನ್ನು ಮರೆತು ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ Mothers Day ಮತ್ತು Father's Day ಸಂಭ್ರಮದ ಆಚರಣೆಯೂ ಮುಗಿದು ಹೋಗುತ್ತದೆ. ಇದು ಮುಂಬುರುವ ದಿನದವರೆಗೆ ನೋಡಿಕೊಂಡು ಖುಷಿಹಂಚಿಕೊಳ್ಳುವ ಮನಗಳಿಗೆ ತಮ್ಮ ತಂದೆ ತಾಯಿ ಜ್ಞಾಪಕಕ್ಕೆ ಬರುವುದು ಮಗದೊಂದ ದಿನದಲ್ಲೇ. ಇದರಿಂದ ಸಮಾಜಕ್ಕೆ ಕೊಟ್ಟ ಸಂದೇಶವಾದರೂ ಏನು? ಇದರಿಂದ ಮುಂದಿನ ಪೀಳಿಗೆಯವರಿಗೆ ಕಲಿತದ್ದಾದರೂ ಏನು? ಒಂದು ಕ್ಷಣವೂ ಮುಖ ಕೊಟ್ಟು ಮಾತನಾಡದ ಜೀವಗಳಿಗೆ ಸಾಮಾಜಿಕ ಮಾದ್ಯಮದಲ್ಲಿ ಅವರ ಹುಟ್ಟುಹಬ್ಬದ ದಿನ, ವಿವಾಹ ವಾರ್ಷಿಕೋತ್ಸವದ ದಿನ, ಇನ್ನು ಮುಂತಾದ ಸಂಧರ್ಭದಲ್ಲಿ ತುಂಬು ಹೃದಯದಿಂದ ಹಾರೈಕೆಯ ಸುರಿಮಳೆಯಾಗುತ್ತದೆ. ಅವರೊಂದಿಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಅವರ ವ್ಯಕ್ತಿತ್ವದ ಬಗ್ಗೆ ಈರ್ಷೆ, ಜಿಗುಪ್ಸೆಯಿದ್ದರೂ ಒಲ್ಲದ ಮನಸ್ಸಿನಿಂದ ಅವರಿಗೆ ಶುಭಕಾಮನೆಗಳನ್ನು ಹರಸುತ್ತೇವೆ. ಇಲ್ಲಿ ಅವರಿಗೆ ಶುಭಾಶಯ ಕೋರುವುದೇ ತಪ್ಪು ಅನ್ನುವ ಅಭಿಪ್ರಾಯವಲ್ಲ. ಆದರೆ ಎಷ್ಟು ಸಮಂಜಸ ಎಂಬುದು ಉತ್ತರವಿಲ್ಲದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಒಮ್ಮೆಯೂ ತನ್ನ ಸ್ನೇಹದ ಬಗ್ಗೆ ಹೆಮ್ಮೆಪಡೆದ ಗೆಳೆಯ ಗೆಳತಿಯರು ವರ್ಷಕ್ಕೊಮ್ಮೆ ಬರುವ Friendship Day ಹೆಸರಿನಲ್ಲಿ ಗೆಳತನದ ಮಹತ್ವ ಸಾರುವ ಉದ್ದುದ್ದ‌ ಉದ್ಘೋಷಣೆಗಳ ಉಸಾಬರಿಗೆ ಮಾರುಹೋಗುತ್ತಾರೆ. ಅವರ ಆಗುಹೋಗುಗಳಿಗೆ ಬೆನ್ನೆಲುಬಾಗಿ ನಿಂತು ಕಷ್ಟ ಸುಖಗಳಲ್ಲಿ ಸಮಪಾಲುದಾರರಾದ ಸ್ನೇಹಿತರು ಪ್ರತಿಕ್ಷಣವೂ ಅವರೊಂದಿಗೆ ಭಿನ್ನಾಭಿಪ್ರಾಯಗಳಿದ್ದರೂ ಆ ದಿನದಂದು ಮಾತ್ರ ಮತ್ತೆ ಹೂಮಳೆಯ ಸಂಭ್ರಮಮೇ. ಮತ್ತೆ ನೆನಪಿಗೆ ಬರುವುದು ಆ ದಿನವೇ ..