ಮನದ ಮೂಲೆಯಲಿದ್ದ ಅವಿತಿದ್ದ ಅವಿಸ್ಮರಣೀಯ ಕ್ಷಣಗಳನು ಓರೆಹಚ್ಚಿ ಪರೀಕ್ಷಿಸುವಂತೆ ಮಾಡಿ ಆನಂದದಿ ಆನಂದಬಾಷ್ಪದಿ ಮುಳುಗೇಳಿಸಿದ ಅನುರಾಗಿ ಗೆಳೆಯನಂತೆ ನೀನು ಕಳೆದು ಹೋದ ಪ್ರೀತಿಯಲಿ ಕಣ್ಣೀರ್ಮಳೆಗೆರೆವಾಗ ಕಾಣದ ಮನಕೆ ಕನ್ನಡಿ ಹಿಡಿದು ಕಂಬನಿಯ ಕಾಣಿಕೆಯನು ಅಕ್ಷರದಲಿ ಆಂತರ್ಯವನು ಬಡಿದೆಬ್ಬಸಿದ ನಿಜ ಪ್ರೇಮಿ ನೀನು ಕಣ್ಣೆದುರಿಗಿಲದಿದ್ದರೂ ಕರುಣೆಯ ಪನ್ನೀರಲಿ ಮುಳುಗೇಳುವಂತೆ ಮಾಡಿ ಸುಖ ದುಃಖ ಜನನ ಮರಣ ಪ್ರೀತಿ ಪ್ರೇಮ ಸಾವು ನೋವು ಅತಿವೃಷ್ಟಿ ಅನಾವೃಷ್ಟಿ ಎಲ್ಲ ರೀತಿಯ ಜಗ - ಮನದ ಏರಿಳಿತಗಳಗೂ ಸ್ಪಂದಿಸುವಂತೆ ಮಾಡಿದ ಅದ್ಬುತ ಕಲೆಗಾರ ನೀನು ಅದೊಂದು ಮುಗಿಯಲಾರದ ಕಥೆ ನಿನ್ನ ಬಗೆ ಹೊಗಳುವಿಕೆ ಅತಿಯಾದರೂ ಮನಕೆ ನೀನೆ ಬೇಕು ಸಂತೈಸಿಲೂ ಒಂದು ಭಾವಕೆ ಸಾವಿರಾರು ಅರ್ಥ ನೀಡಿ ಮನಪುಳಕವಂತೆ ಮಾಡುವ ಮೂರು ವರ್ಷದ ಹುಟ್ಟುಹಬ್ಬದ ಹೊಸ್ತಿಲಲಿರುವ YQ ಕುಟುಂಬಕೆ ಹಾಗೂ ಪ್ರತಿಯೊಬ್ಬ ಸದಸ್ಯ - ಸದಸ್ಯೆಯರಿಗೂ ಶುಭಾಶಯಗಳು.... ಬರಹಗಾರರಿಗೋಸ್ಕರ ಸೃಷ್ಟಿಯಾಗಿ ಮೂರು ವರುಷ ತುಂಬಿದ ಈ ನಿಮ್ಮ ಯುವರ್ಕೋಟ್, ನಿಮ್ಮ ಜೀವನಕ್ಕೆಷ್ಟು ಹತ್ತಿರ? #ನನ್ನYourQuote #yqbirthday #yqjogi #yqkannada #collab #collabwithjogi #YourQuoteAndMine #yqmandya Collaborating with YourQuote Jogi