Nojoto: Largest Storytelling Platform

ಕನಸ ಕೆಡಸಿದವರು..🙇‍♀ ನನ್ನ ಕಣ್ಣಲ್ಲಿಯೂ ಒಂದು ಕನಸಿತ್ತು

ಕನಸ ಕೆಡಸಿದವರು..🙇‍♀
ನನ್ನ ಕಣ್ಣಲ್ಲಿಯೂ ಒಂದು ಕನಸಿತ್ತು
ನನ್ನ ಮನದಲ್ಲಿ ನೂರು ಆಸೆಗಳಿದ್ದವು
ಆಸೆಗೆ ಬೆಂಕಿಯಿಟ್ಟು,ಕನಸ ಕೆಡಸಿದರಲ್ಲ
ದೂರ್ತರು,ಮಿತ್ರ ದ್ರೋಹಿ ವಿಶ್ವಾಸಘಾತರು..!
ಮುಕ್ಕಿ ತಿಂದವು ನಾಯಿ, ಬೇಡಿಕೊಂಡರು
ಹಕ್ಕಿಯ ಹಾರಾಟ ಕೊನೆಯಾಯ್ತು 
ಬಿಕ್ಕಿ ಅತ್ತರೂ ಯಾರೂ ಕೇಳಲಿಲ್ಲ
ನೆಕ್ಕಿ ಹಾಕಿ,ಕುಕ್ಕಿದರೂ ಎಲ್ಲ ಕನಸಿನ ಮೊಟ್ಟೆಗಳ..!
ನಂಬಿಕೆಯೆಂಬುದು ಕುಂದಿ ಕುತ್ತು ಬಂದಿತು
ದುರುಳರ ಸುಳಿಯಲಿ ಸಿಕ್ಕು ನಲುಗಿದೆ
ಮನದೊಳಗೆ ಸಹಿಸಲಸಾದ್ಯ ನೋವು 
ಕಣ್ಣಿರು ಒರೆಸುವ ಕೈಗಳೆ ಕೊಂದವು ಕನಸ..!
ಬೇಡ ಹೆಣ್ಣಿನ ಜನ್ಮ, ಸಾಕು ನೋವು
ಹರಿದು ತಿಂದ ಪಾಪಿಗಳಿಗೆ ದಿಕ್ಕಾರವಿರಲಿ
ಸಾವಿತ್ತ ವಿಧಿಗೆ ನನ್ನ ಚಿತ್ಕಾರ ಕೇಳದೆ
ಅರಳುವ ಮುನ್ನ ಕನಸೊಂದ ಸುಟ್ಟಿತಲ್ಲ..!
ಕನಸ ಸುಟ್ಟವರು,ಮನಸು ಮುರಿದವರು
ಹರಿದು ತಿಂದವರು ಎಲ್ಲ ನನ್ನವರೇ..ಥೂ
ಹೇಸಿಗೆ ತಿಂದ ಮತ್ತೆ ಕೆಲವರ್ಯಾರೊ
ಅವರ ನೀಚತನ ಅಳಿದು ನ್ಯಾಯ ಗೆಲ್ಲದೆ?

Justice for Madhu..🙏

✒ಲಕುಮಿಕಂದ ಮುಕುಂದ
ಸಾ:-ಮುದೇನೂರ. ಜಿ:-ಬೆಳಗಾವಿ Justice for madhu..👰
ಕನಸ ಕೆಡಸಿದವರು..🙇‍♀
ನನ್ನ ಕಣ್ಣಲ್ಲಿಯೂ ಒಂದು ಕನಸಿತ್ತು
ನನ್ನ ಮನದಲ್ಲಿ ನೂರು ಆಸೆಗಳಿದ್ದವು
ಆಸೆಗೆ ಬೆಂಕಿಯಿಟ್ಟು,ಕನಸ ಕೆಡಸಿದರಲ್ಲ
ದೂರ್ತರು,ಮಿತ್ರ ದ್ರೋಹಿ ವಿಶ್ವಾಸಘಾತರು..!
ಮುಕ್ಕಿ ತಿಂದವು ನಾಯಿ, ಬೇಡಿಕೊಂಡರು
ಹಕ್ಕಿಯ ಹಾರಾಟ ಕೊನೆಯಾಯ್ತು 
ಬಿಕ್ಕಿ ಅತ್ತರೂ ಯಾರೂ ಕೇಳಲಿಲ್ಲ
ನೆಕ್ಕಿ ಹಾಕಿ,ಕುಕ್ಕಿದರೂ ಎಲ್ಲ ಕನಸಿನ ಮೊಟ್ಟೆಗಳ..!
ನಂಬಿಕೆಯೆಂಬುದು ಕುಂದಿ ಕುತ್ತು ಬಂದಿತು
ದುರುಳರ ಸುಳಿಯಲಿ ಸಿಕ್ಕು ನಲುಗಿದೆ
ಮನದೊಳಗೆ ಸಹಿಸಲಸಾದ್ಯ ನೋವು 
ಕಣ್ಣಿರು ಒರೆಸುವ ಕೈಗಳೆ ಕೊಂದವು ಕನಸ..!
ಬೇಡ ಹೆಣ್ಣಿನ ಜನ್ಮ, ಸಾಕು ನೋವು
ಹರಿದು ತಿಂದ ಪಾಪಿಗಳಿಗೆ ದಿಕ್ಕಾರವಿರಲಿ
ಸಾವಿತ್ತ ವಿಧಿಗೆ ನನ್ನ ಚಿತ್ಕಾರ ಕೇಳದೆ
ಅರಳುವ ಮುನ್ನ ಕನಸೊಂದ ಸುಟ್ಟಿತಲ್ಲ..!
ಕನಸ ಸುಟ್ಟವರು,ಮನಸು ಮುರಿದವರು
ಹರಿದು ತಿಂದವರು ಎಲ್ಲ ನನ್ನವರೇ..ಥೂ
ಹೇಸಿಗೆ ತಿಂದ ಮತ್ತೆ ಕೆಲವರ್ಯಾರೊ
ಅವರ ನೀಚತನ ಅಳಿದು ನ್ಯಾಯ ಗೆಲ್ಲದೆ?

Justice for Madhu..🙏

✒ಲಕುಮಿಕಂದ ಮುಕುಂದ
ಸಾ:-ಮುದೇನೂರ. ಜಿ:-ಬೆಳಗಾವಿ Justice for madhu..👰