ಏನೆಂದು ಬರೆಯಲಿ ಕರಗದ ನಿನ್ನ ಕೋಪವ ಕರಗಿಸಲು ಏನೆಂದು ನುಡಿಯಲಿ ನಿನ್ನ ಹುಸಿ ಮುನಿಸ ಹುಸಿಯಾಗಿಸಲು ಎಂದೂ ಇನ್ನೆಂದೂ ಹೀಗಾಗದಿರಲಿ ನನ್ನ ನೋವಲ್ಲೂ ಜೊತೆಗಿರುವೆನೆಂದವ ಇಂದೇಕೆ ಕೋಪದೊಳಗೆ ಕೊಲ್ಲುತಿರುವೆ ಏನೂ ತಿಳಿಯದ ಹಾಗೆ ನಟನೆ ಏಕೆ ನಾ ಬಯಸಿದ್ದು ಬೊಗಸೆ ಪ್ರೀತಿ ಹಿಡಿಯಷ್ಟು ನಿನ್ನೊಲವು ಕಣ್ಣ ತುಂಬ ಕೆಂಡದಂತ ಕೋಪವಲ್ಲ ಕಾಣದಂತೆ ಹುದುಗಿಸಬೇಡ ನಿನ್ನೆದೆಯ ಒಲವನು ನನ್ನೆದೆಯು ಕೇಳುತಿದೆ ನಿನ್ನೆದೆಯ ಕೂಗನು ಕೈಯ ಮದರಂಗಿ ಮಾಸುವ ಮುನ್ನ ಮರೆಮಾಚು ನಿನ್ನ ಹುಸಿ ಮುನಿಸನು....!!!!!!!! #ನನ್ನವನ #ಕೋಪ #ಹುಸಿಕೋಪ #yqquotes #yqjogi_kannada #yqloveforever #krantadarshi kanti