ಸರ್ಕಾರವು ಮದ್ಯಪಾನದ ವ್ಯವಹಾರದಿಂದ ಕೋಟ್ಯಂತರ ಆದಾಯ ಗಳಿಸಲು ಬೇರೆ ಮಾರ್ಗವಿಲ್ಲದೆ ರಾಜ್ಯದಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ ಮದ್ಯಪಾನದ ಅಂಗಡಿಗಳನ್ನು ತೆರೆಯಿತು. ಇದು ಸರ್ಕಾರಕ್ಕೆ ಆದಾಯ ತರುವ ಮೂಲವಾದರೂ ಜನರು ತಮ್ಮ ಹಣವನ್ನು ಕುಡಿತದ ಮೇಲೆ ವೆಚ್ಚಮಾಡುವುದರಿಂದ ಅವರ ಜೀವನ ಮಟ್ಟವು ಕುಸಿಯುತ್ತದೆ. ಇದರಿಂದ ಅವರ ಜೀವನ ನಿರ್ವಹಣಾ ವೆಚ್ವ ಅಧಿಕವಾಗಿ ವಾಮಮಾರ್ಗದಲ್ಲಿ ಆದಾಯ ಗಳಿಸಲು ಮುಂದಾಗುತ್ತಾರೆ. ಸಾಮಾನ್ಯ ಜನರಾದರೆ ಸಮಾಜಬಾಹೀರ ಕೃತ್ಯಗಳಲ್ಲಿ ತೊಡಗಿದರೆ ಗೌರವಾನ್ವಿತ ಸರ್ಕಾರದ ದೊರೆಗಳು ಭ್ರಷ್ಟಾಚಾರ, ಲಂಚಗುಳಿತನದಲ್ಲಿ ತೊಡಗಿ ಸಮಾಜದಲ್ಲಿ ಅನೇಕ ವೈಪರೀತ್ಯಗಳು ಉಂಟಾಗುತ್ತದೆ. ಆದರೂ ಸರ್ಕಾರ ನಡೆಸುವ ಆಧುನಿಕ ಮಹಾರಾಜರುಗಳಿಗೆ ಬೇಕಾಗಿರುವುದು ಹೇಗಾದರೂ ಸರಿಯೇ ತಮ್ಮ ಖಜಾನೆ ತುಂಬಿಸಿಕೊಳ್ಳುವ ಭರದಲ್ಲಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಸಾಮಾನ್ಯವಾಗಿ ಸರ್ಕಾರದ ಆದಾಯದ ಗಳಿಕೆಯಲ್ಲಿ ಸಿಂಹಪಾಲು ಹೊಂದಿರುವ ಮದ್ಯಪಾನದ ಆದಾಯಕ್ಕೆ ಪರ್ಯಾಯವಾಗಿ ಬೇರೆ ಆದಾಯದ ಮೂಲವನ್ನು ಕಂಡುಕೊಳ್ಳುವಲ್ಲಿ ಭಾರತದ ರಾಜಕೀಯ ನಿಪುಣಗರಿಷ್ಟೇ ಅಲ್ಲದೆ ಆರ್ಥಿಕ ತಜ್ಞರಿಗೂ ಬಗೆಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ. ಜಗತ್ತಿನ ಇತರೆ ದೇಶಗಳಿಗೆ ಮಾದರಿಯಾಗಿ ಅನೇಕ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ತೋರಿಸುವ ಆಸಕ್ತಿಯನ್ನು ಬೆಳೆಸಿಕೊಂಡರು ಭಾರತದ ಆದಾಯದ ಮೂಲಗಳನ್ನು ಪುನರ್ ಸಂಘಟಿಸಿಕೊಳ್ಳುವ ಹಂತದಲ್ಲಿ ಸೋತು ಪ್ರಪಂಚದೆದರೂ ಕುಡಿತದಿಂದ ಅಧಿಕ ಆದಾಯ ಗಳಿಸುವ ದೇಶ ಎಂದು ಹೇಳಿಕೊಳ್ಳುವ ದೌರ್ಭಾಗ್ಯ ಭಾರತದ್ದಾಗಿದೆ. ಇಂತಹ ಹೇಯಕೃತ್ಯವನ್ನು ಸಾರಸಗಾಟಾಗಿ ತಿರಸ್ಕರಿಸಿ ಜನರ ಜೀವನಮಟ್ಟ ಉತ್ತಮಗೊಳಿಸಬೇಕಾದ ಸರ್ಕಾರವೇ ಮದ್ಯದಂಗಡಿ ತೆರೆಯಲು ಒಪ್ಪಿಗೆ ನೀಡುತ್ತದ. ಹಾಗೇ ಸುಮ್ಮನೇ ನನಗನ್ನಿಸಿದ್ದು... Ravindra B R ರವರ ಬರಹವನ್ನೊದಿ ಬರೆದಿದ್ದು... ಸರ್ಕಾರವು ಮದ್ಯಪಾನದ ವ್ಯವಹಾರದಿಂದ ಕೋಟ್ಯಂತರ ಆದಾಯ ಗಳಿಸಲು ಬೇರೆ ಮಾರ್ಗವಿಲ್ಲದೆ ರಾಜ್ಯದಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ ಮದ್ಯಪಾನದ ಅಂಗಡಿಗಳನ್ನು ತೆರೆಯಿತು. ಇದು ಸರ್ಕಾರಕ್ಕೆ ಆದಾಯ ತರುವ ಮೂಲವಾದರೂ ಜನರು ತಮ್ಮ ಹಣವನ್ನು