Nojoto: Largest Storytelling Platform

ಶಿವ -ಸಿದ್ದಾರೂಡರ ಪವಾಡ ಒಂದೊಮ್ಮೆ ಈ ಬದುಕು  ಸುನಾಮಿ ಅ

ಶಿವ -ಸಿದ್ದಾರೂಡರ ಪವಾಡ


ಒಂದೊಮ್ಮೆ ಈ ಬದುಕು 

ಸುನಾಮಿ ಅಲೆಗಳಿಗೆ ಸಿಕ್ಕಾಗ 

ನಲುಗಿ ಹೋಗಿದ್ದೆ ಬೇಸರದಿ 

ಈ ಕಲಿಯುಗದಲಿ ನೀನಿಲ್ಲವೆಂದು 

ದೈವನಿಂದಲೇ ಮಾಡಿ ಪಾಪಿಯಾಗಿದ್ದೆ


ಗುರುವಿನ ಮಾರ್ಗದರ್ಶನದಿ 

ಲಿಂಗವ ಧರಿಸಿ ಧ್ಯಾನಿಸಿದೆ

 ಇಷ್ಟಲಿಂಗವೇ ಉಸಿರಾಯ್ತು

 ಬದುಕೆಲ್ಲಾ ಶಿವಮಯವಾಯಿತು 

ನಡೆ-ನುಡಿಯಲ್ಲಿ ಲಿಂಗವೇ ಆವರಿಸಿತು


ಶ್ರೀ ಸಿದ್ಧಾರೂಢರ ಮನದಲಿ ನೆನೆದು

ಅಜ್ಜನ ಪರಿ ಪರಿಯಾಗಿ ಬೇಡಿದೆ 

ಭವ ಬಂಧನದ ಬೇಗೆಯ ತಾಳಲಾರದೆ 

ಹೃದಯ ಬಡಿತವೆಲ್ಲ ಶಿವನಾಮ ಸ್ಮರಿಸಿ 

ಹಗಲಿರುಳು ಭಕ್ತಿಯಲ್ಲಿ ಮುಳುಗಿದೆ

©PARVATI KAMBLI #SuperBloodMoon
ಶಿವ -ಸಿದ್ದಾರೂಡರ ಪವಾಡ


ಒಂದೊಮ್ಮೆ ಈ ಬದುಕು 

ಸುನಾಮಿ ಅಲೆಗಳಿಗೆ ಸಿಕ್ಕಾಗ 

ನಲುಗಿ ಹೋಗಿದ್ದೆ ಬೇಸರದಿ 

ಈ ಕಲಿಯುಗದಲಿ ನೀನಿಲ್ಲವೆಂದು 

ದೈವನಿಂದಲೇ ಮಾಡಿ ಪಾಪಿಯಾಗಿದ್ದೆ


ಗುರುವಿನ ಮಾರ್ಗದರ್ಶನದಿ 

ಲಿಂಗವ ಧರಿಸಿ ಧ್ಯಾನಿಸಿದೆ

 ಇಷ್ಟಲಿಂಗವೇ ಉಸಿರಾಯ್ತು

 ಬದುಕೆಲ್ಲಾ ಶಿವಮಯವಾಯಿತು 

ನಡೆ-ನುಡಿಯಲ್ಲಿ ಲಿಂಗವೇ ಆವರಿಸಿತು


ಶ್ರೀ ಸಿದ್ಧಾರೂಢರ ಮನದಲಿ ನೆನೆದು

ಅಜ್ಜನ ಪರಿ ಪರಿಯಾಗಿ ಬೇಡಿದೆ 

ಭವ ಬಂಧನದ ಬೇಗೆಯ ತಾಳಲಾರದೆ 

ಹೃದಯ ಬಡಿತವೆಲ್ಲ ಶಿವನಾಮ ಸ್ಮರಿಸಿ 

ಹಗಲಿರುಳು ಭಕ್ತಿಯಲ್ಲಿ ಮುಳುಗಿದೆ

©PARVATI KAMBLI #SuperBloodMoon