Nojoto: Largest Storytelling Platform

ಕಂಡ ಕನಸೊಂದು ಇಂದು ನನಸಾಗಿದೆ ಲೇಖನಿ ಹಿಡಿದ ಕೈ ಹಾಳೆಯ ತುಂ

ಕಂಡ ಕನಸೊಂದು
ಇಂದು ನನಸಾಗಿದೆ
ಲೇಖನಿ ಹಿಡಿದ ಕೈ
ಹಾಳೆಯ ತುಂಬಾ
ಪದಗಳ ಚಿತ್ತಾರ 
ಬಿಡಿಸಿದೆ..

ಮನದ ಭಾವಗಳು
ಅರಳಿವೆ ಅಕ್ಷರಗಳ
ಮೂಲಕ ಪದಗಳಲ್ಲಿ
ಸೇರಿ..

ನೋವು ನಲಿವು
ಸೋಲು ಗೆಲುವು
ಪ್ರೀತಿ ಸ್ನೇಹ ಎಲ್ಲವೂ
ಪದಮಾಲೆಯಲ್ಲಿ
ಪೋಣಿಸಿರುವೆ 
ಒಂದೊಂದಾಗಿ ಸೇರಿಸಿ..

ಹೆಕ್ಕಿತಂದ ಅಕ್ಷರಗಳ
ಈ ಜೋಳಿಗೆ ಖಾಲಿ
ಆಗುವ ಭಯವಿದೆ..
ಎಲ್ಲಾ ಭಾವನೆಗಳಿಗೂ
ಸರಿಯಾದ ಪದಗಳು
ಸಿಗಲಾರದೇನೋ ಎಂಬ
ಅಂಜಿಕೆ ಸದ್ದಿಲ್ಲದೆ ಈ
ಮನವ ಕಾಡಿದೆ..!!

©Shamna
  #Pattiyan 
#ಕವನ
shamna5654039728668

Shamna

New Creator

#Pattiyan #ಕವನ

228 Views