ಅವ್ವ ನಿನ್ನ ಕರುಳ ಬಳ್ಳಿಯ ಹೂವು ನಾನು ನಿನ್ನ ತೋಳತೆಕ್ಕೆಯಲ್ಲಿ ಘಮಿಸುವೆ ಇನ್ನು.!ಪ!! ಬಂಧು ಬಳಗ ಸ್ನೇಹಿತರೆಲ್ಲ ಬೇಡ ಏನು ಚೆಂದದೊಂದು ಕತೆಯ ಹೇಳು ಸಾಕಿನ್ನೆನು.. ನನ್ನ ಎದೆಯ ಗುಡಿಯಲ್ಲಿ ದೇವತೆ ನೀನು ನಿನ್ನ ಸ್ತುತಿಸಲು ಒಡಿ ಬಂದ ಭಕ್ತ ನಾನು..! ತಂದೆ ತಾಯಿ ದೇವರಂತೆ ಪೂಜಿಪೆ ನಾನು ಒಂದೆ ಒಂದು ಭಾವಗೀತೆ ಹಾಡು ನೀನು.. ಅವ್ವ ನನ್ನ ಕಣ್ಣಿನಲ್ಲು ನಿನ್ನದೆ ಕನಸು ಭೂಮಿಗಿಳಿದ ದೇವತೆಗೆ ಎಂತಹ ಮನಸು.! ನನ್ನ ತೋಳಿನ ಸಾಧನೆಗೆ ಸ್ಪೂರ್ತಿ ನೀನು ನಿನ್ನ ಅಣತಿಯಂತೆ ನಾನು ಸಾಗುವೆ ಇನ್ನು.. ನಿನ್ನ ಒಡಲಲಿ ನನ್ನ ಬಚ್ಚಿ ಮುದ್ದಿಸು ನೀನು ಕಣ್ಣಮುಚ್ಚಿ ನನ್ನ ರಮಿಸಿ ಮಲಗಿಸು ಇನ್ನು..! ಹಕ್ಕಿಯಂತೆ ರೆಕ್ಕೆ ಕಟ್ಟು, ನಾ ಸುತ್ತಿ ಬರುವೆ ಬಾನಬೆಳ್ಳಿ ಚಂದ್ರನ ಕೂಡಿ ಆಡಿ ನಲಿವೆ.. ತಾರೆಗಳ ಹಾರ ತಂದು ನಿನ್ನ ಪಾದಕಿಡುವೆ ಭಕ್ತಿಯಿಂದ ಕೈಯ ಮುಗಿದು ಹಾಡಿ ಕುಣಿವೆ.! #ಅವ್ವ #ಪ್ರೀತಿ #ದೇವತೆ