Nojoto: Largest Storytelling Platform

ನಭೋಮಂಡಲದಿ ರಾರಾಜಿಪ ಸೂರ್ಯ ಭೂಮಂಡಲದಲ್ಲೆಲ್ಲಾ ಕಿರಣದೌದಾರ್

ನಭೋಮಂಡಲದಿ ರಾರಾಜಿಪ ಸೂರ್ಯ
ಭೂಮಂಡಲದಲ್ಲೆಲ್ಲಾ ಕಿರಣದೌದಾರ್ಯ
ಮಿಳಿತವಾಗಿದೆ ಕೂಜನದ ಮಾಧುರ್ಯ
ರೋಮಾಂಚಿತವು ಮಾನವನಾಂತರ್ಯ

ಮೂಡಣಕೆ ಮುತ್ತಿಕ್ಕುವ ದಿವಾಕರ
ಮುಗುಳ್ನಗೆ ಬೀರುವ ಕುಸುಮಾಕರ
ಆಮೋದ ಅರಸುತಿರುವ ಮಧುಕರ
ನಗೆ ಚೆಲ್ಲುತಿರುವ ಪುಷ್ಪಗಳ ಕೇಸರ

ರಂಗೇರಿ ಬಿಸಿಯಾಗುವ ಬಾಂದಳ
ಕಂಪಿಡುವ ಕೆಂಪಾದ ಕುಸುಮದಳ
ಚಿಗುರೆಲೆಯಲಿ ಇಬ್ಬನಿಯು ಪುಷ್ಕಳ
ಭೂರಮೆಯಲಿ ರವಿರಶ್ಮಿಯು ಹೇರಳ #goodmorning #amargude  #poetry #yqjogi #kannadaquotes #ಪ್ರಾಸಪದ್ಯ #ಪ್ರಾಸ #ಸೂರ್ಯೋದಯ
ನಭೋಮಂಡಲದಿ ರಾರಾಜಿಪ ಸೂರ್ಯ
ಭೂಮಂಡಲದಲ್ಲೆಲ್ಲಾ ಕಿರಣದೌದಾರ್ಯ
ಮಿಳಿತವಾಗಿದೆ ಕೂಜನದ ಮಾಧುರ್ಯ
ರೋಮಾಂಚಿತವು ಮಾನವನಾಂತರ್ಯ

ಮೂಡಣಕೆ ಮುತ್ತಿಕ್ಕುವ ದಿವಾಕರ
ಮುಗುಳ್ನಗೆ ಬೀರುವ ಕುಸುಮಾಕರ
ಆಮೋದ ಅರಸುತಿರುವ ಮಧುಕರ
ನಗೆ ಚೆಲ್ಲುತಿರುವ ಪುಷ್ಪಗಳ ಕೇಸರ

ರಂಗೇರಿ ಬಿಸಿಯಾಗುವ ಬಾಂದಳ
ಕಂಪಿಡುವ ಕೆಂಪಾದ ಕುಸುಮದಳ
ಚಿಗುರೆಲೆಯಲಿ ಇಬ್ಬನಿಯು ಪುಷ್ಕಳ
ಭೂರಮೆಯಲಿ ರವಿರಶ್ಮಿಯು ಹೇರಳ #goodmorning #amargude  #poetry #yqjogi #kannadaquotes #ಪ್ರಾಸಪದ್ಯ #ಪ್ರಾಸ #ಸೂರ್ಯೋದಯ
amargudge1414

Amar Gudge

Bronze Star
New Creator
streak icon20

#GoodMorning #amargude poetry #yqjogi #kannadaquotes #ಪ್ರಾಸಪದ್ಯ #ಪ್ರಾಸ #ಸೂರ್ಯೋದಯ