Nojoto: Largest Storytelling Platform

Best amargude Shayari, Status, Quotes, Stories

Find the Best amargude Shayari, Status, Quotes from top creators only on Nojoto App. Also find trending photos & videos aboutama katha love shayari, amazing love images, love express mon boleche amar, amanda love, amazing quotes on life,

  • 8 Followers
  • 1551 Stories

Amar Gudge

               #amargude #inspiration #inspirationalquotes #motivation #motivationalquotes #goodmorning #goodthoughts #ಅಮರೋಕ್ತಿ

Amar Gudge

ನೀನೇ ನನಗೆಲ್ಲ. #ಮನಸ್ಸು #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi

read more
ತೊರೆಯಬಾರದೇ ನನಗಾಗಿ ಮುನಿಸು 
ನಗು ಮೊಗವು ಎಷ್ಟೊಂದು ಸೊಗ‌ಸು
ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1||

ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು
ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು
ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು
ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2||

ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು
ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು
ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು
ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3|| ನೀನೇ ನನಗೆಲ್ಲ.

#ಮನಸ್ಸು #yqjogi #yqkannada #collab #amargude  #collabwithjogi #YourQuoteAndMine
Collaborating with YourQuote Jogi

Amar Gudge

ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ
ಮನದಲಿ ನೆನಪು ಪ್ರೇಮ ಕಹಾನಿ
ಅಬ್ಬರಿಸುತಿದೆ ನೋವಿನ ಮಾರ್ದನಿ
ವಿರಹದಿಂದಾದೆ ಮಾತಿರದ ಮೌನಿ #restzone #shayari #poetry #yqjogi #amargude #broken #brokenheart

Amar Gudge

ಕಾಯಬೇಕೆ? #ಕರೆ #yqjogi #yqkannada #Collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi

read more
ನೋಟದೊಂದಿಗೆ ಆರಂಭ
ನಗುವಿನೊಂದಿಗೆ ಪರಿಚಯ
ಹೆಸರು ಅರಿಯುವ ತವಕ
ತಿಳಿದಾಗ ಮನದಲಿ ಪುಳಕ ||1||

ಮಾತನಾಡಲು ಕಾರಣದ ಶೋಧನೆ
ನೆನಪಾಯ್ತು ಸದ್ವಿಚಾರದ ಬೋಧನೆ
ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ
ಉದಿಸಿತು ಮನದಲಿ ಪ್ರೇಮ ಅರುಣ||2||

ವಚನದೊಂದಿಗೆ ಸಂದೇಶ ನಿರಂತರ
ಹಗಲಿರುಳು ಕಾಡುವ ನೆನಪು ಮಧುರ
ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ
ವರುಷ ದಿನದಂತೆ ನವ ಅನುಭವಸಾರ||3||

ಸಾಗುತಿತ್ತು ಸತತ ಅನುರಾಗದ ಪಯಣ
ಹಠಾತ್ತನೆ ನಿಂತಿತು ಒಲವಿನ ಪ್ರಯಾಣ 
ಬರಲಿಲ್ಲ ಮುಂದುವರಿಯಲು ಕರೆಯು 
ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ?

#ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine
Collaborating with YourQuote Jogi

Amar Gudge

ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ

read more
              ಮುದ್ದು ಮುದ್ದಾಗಿಹ  ಮಂದಹಾಸ 
ತುಂಟತನದ ಕುಡಿ ನೋಟ ವಿಲಾಸ 
ಮುತ್ತಿನಂತಿರುವ ದಂತಗಳ ಪ್ರಕಾಶ
ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 ||

ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ  ಕಾಂತಿ ಕಾಣುವುದೇ ಆನಂದ

Amar Gudge

#cinemagraph #Goodevening #Sky #SunSet #amargude shayari poetry

read more
ಪಡುವಣದಲ್ಲಸ್ತಮಿಸುವ ಭಾಸ್ಕರ
ಆಗಸಕ್ಕೆ ಆಗಮಿಸುತ್ತಿರುವ ಚಂದಿರ
ಮಿನುಗುವ ತಾರೆಗಳ ಮುತ್ತಿನ ಹಾರ
ತಂಪಾಗಿಸುವ ಬೆಳದಿಂಗಳು ಸುಂದರ  #cinemagraph #goodevening #sky #sunset #amargude #shayari #poetry

Amar Gudge

#ಕನ್ನಡ #amargude

read more
ಮನಸ್ಸಿನ ಭಾವ ಬರಹದಲ್ಲಿ ಪ್ರಕಟ
ನಯನದಲಿ ದರ್ಶನ ಹೇಳಲಾಗದ ಸಂಕಟ
ಅಡಗಿಸಿಟ್ಟ ಮುನಿಸು ಮೊಗದಲಿ ಗೋಚರ
ಗೌಪ್ಯವಾಗಿರಲಿ ರಹಸ್ಯವು ನಿರಂತರ #ಕನ್ನಡ #amargude

Amar Gudge

#ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #Sunrise shayari poetry #amargude

read more
ಹಿಂಜರಿಯಿತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ

ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ

ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ

ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ #ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #sunrise #shayari #poetry #amargude

Amar Gudge

ಏನೆಂಬುದನ್ನು ಹಂಚಿಕೊಳ್ಳಿ. #ಬರೆಯುತ್ತಾ #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi

read more
ಹೊಸ ಹೊಸ ಪದಗಳ ಪರಿಚಯದೊಂದಿಗೆ ಚಿಕ್ಕದಾಗಿ ಚೊಕ್ಕದಾಗಿ ಬರೆಯುವುದನ್ನು ಕಲಿತೆನು, ವಿವಿಧ ಮಜಲುಗಳನ್ನು, ಹೊಸತರಹದ ಬರಹ ಇನ್ನೂ ಅನೇಕ ವಿಷಯಗಳ ಕಲಿತೆನು. ಬರಹದಿಂದ ಮನದ ಭಾರಕ್ಕೆ ಬರಹಿಡಿದಿತ್ತು, ಆದರೇ ವೈಕ್ಯೂ ಕುಟುಂಬ ಮುಚ್ಚುವ ವಿಷಯದಿಂದ ಚುಚ್ಚುತಿರುವಂತೆ ಅನಿಸುತ್ತಿದೆ. ಆತ್ಮೀಯ ಬರಹದ ಬಂಧುಗಳೇ 😥😢😢😥 ಯಾಕೋ ಇದನ್ನು ಇನ್ನಷ್ಟು ಹೆಚ್ಚು ಬರೆಯಲಾಗುತ್ತಿಲ್ಲ. ಕ್ಷಮೆಯಿರಲಿ ಜೋಗಿಜೀ........ ಏನೆಂಬುದನ್ನು ಹಂಚಿಕೊಳ್ಳಿ.

#ಬರೆಯುತ್ತಾ #yqjogi #yqkannada #collab #amargude #collabwithjogi #YourQuoteAndMine
Collaborating with YourQuote Jogi

Amar Gudge

love #lovequotes shayari poetry #poem #amargude

read more
            #love #lovequotes #shayari #poetry #poem #amargude
loader
Home
Explore
Events
Notification
Profile