Nojoto: Largest Storytelling Platform

"ಬೀದಿಗೆ ಬಿದ್ದವರು" ಎಲ್ಲ ಇದ್ದು ಇಲ್ಲದಂತೆ ಬದುಕುತ್ತಿದ್ದ

"ಬೀದಿಗೆ ಬಿದ್ದವರು"
ಎಲ್ಲ ಇದ್ದು ಇಲ್ಲದಂತೆ ಬದುಕುತ್ತಿದ್ದೆವೆ
ಕಟ್ಟಿದ ಕನಸುಗಳು ಕೊಚ್ಚಿಹೋಗಿವೆ
ನಮ್ಮ ಭಾವನೆಗಳು ಬತ್ತಿ ಮೆತ್ತಗಾಗಿವೆ
ಅಕ್ಷರಶಃ ಬೀದಿಗೆ ಬಿದ್ದಿದ್ದೆವೆ ನಾವು.! 

ತುತ್ತು ಕೂಳಿಗೂ ಗತಿಯಿಲ್ಲದೆ ಒದ್ದಾಡಿ
ಜಾನುವಾರುಗಳ ಪರಸ್ಥಿತಿಗೆ ಮರುಗಿ
ಜೀವಂತ ಹೆಣದಂತೆ ಇದ್ದು ಇಲ್ಲದಂತೆ
ಬದುಕಿದ್ದೆವೆ ಬೀದಿಗೆ ಬಿದ್ದವರು ನಾವು.!

ಕಣ್ಣೆದುರೆ  ನಮ್ಮ ಮನೆಗಳು ತೇಲುತಿವೆ
ಮನಗಳು ಮುರಿದು ಉರಿಯುತಿವೆ
ನನ್ನವರನ್ನೆಲ್ಲ ದಿಕ್ಕು ದಿಕ್ಕಿಗೂ ಹುಡುಕಾಡಿ
ಸೋತಿರುವೆ,ಬೀದಿಗೆ ಬಿದ್ದವರು ನಾವು.!

ನಗುಮೊಗವೇ ಇಲ್ಲ ಬಾಡಿದೆ ಎಂದೋ
ಬೆಳೆದ ಪೈರು,ಆಡಿದ ಸೂರು ಕಾಣದಾಗಿದೆ
ಉಳಿದಿಲ್ಲ ಪ್ರಕೃತಿ ಮುನಿದು ನುಂಗುತ್ತಿದ್ದಾಳೆ
ಬೀದಿಗೆ ಬಿದ್ದವರು ನಾವು,ಬೇಕಿದೆ ನೆರವು.!

-ಲಕುಮಿಕಂದ ಮುಕುಂದ #ಬೀದಿಗೆ ಬಿದ್ದವರು
"ಬೀದಿಗೆ ಬಿದ್ದವರು"
ಎಲ್ಲ ಇದ್ದು ಇಲ್ಲದಂತೆ ಬದುಕುತ್ತಿದ್ದೆವೆ
ಕಟ್ಟಿದ ಕನಸುಗಳು ಕೊಚ್ಚಿಹೋಗಿವೆ
ನಮ್ಮ ಭಾವನೆಗಳು ಬತ್ತಿ ಮೆತ್ತಗಾಗಿವೆ
ಅಕ್ಷರಶಃ ಬೀದಿಗೆ ಬಿದ್ದಿದ್ದೆವೆ ನಾವು.! 

ತುತ್ತು ಕೂಳಿಗೂ ಗತಿಯಿಲ್ಲದೆ ಒದ್ದಾಡಿ
ಜಾನುವಾರುಗಳ ಪರಸ್ಥಿತಿಗೆ ಮರುಗಿ
ಜೀವಂತ ಹೆಣದಂತೆ ಇದ್ದು ಇಲ್ಲದಂತೆ
ಬದುಕಿದ್ದೆವೆ ಬೀದಿಗೆ ಬಿದ್ದವರು ನಾವು.!

ಕಣ್ಣೆದುರೆ  ನಮ್ಮ ಮನೆಗಳು ತೇಲುತಿವೆ
ಮನಗಳು ಮುರಿದು ಉರಿಯುತಿವೆ
ನನ್ನವರನ್ನೆಲ್ಲ ದಿಕ್ಕು ದಿಕ್ಕಿಗೂ ಹುಡುಕಾಡಿ
ಸೋತಿರುವೆ,ಬೀದಿಗೆ ಬಿದ್ದವರು ನಾವು.!

ನಗುಮೊಗವೇ ಇಲ್ಲ ಬಾಡಿದೆ ಎಂದೋ
ಬೆಳೆದ ಪೈರು,ಆಡಿದ ಸೂರು ಕಾಣದಾಗಿದೆ
ಉಳಿದಿಲ್ಲ ಪ್ರಕೃತಿ ಮುನಿದು ನುಂಗುತ್ತಿದ್ದಾಳೆ
ಬೀದಿಗೆ ಬಿದ್ದವರು ನಾವು,ಬೇಕಿದೆ ನೆರವು.!

-ಲಕುಮಿಕಂದ ಮುಕುಂದ #ಬೀದಿಗೆ ಬಿದ್ದವರು