Nojoto: Largest Storytelling Platform

ಕಣ್ಮನ ಸೆಳೆವ ಭ್ರಮರದಂತೆ, ಈ ಹೂವಿಗೆ ಸದಾ ನಿನ್ನದೇ ಚಿಂತ

ಕಣ್ಮನ ಸೆಳೆವ ಭ್ರಮರದಂತೆ,  
ಈ ಹೂವಿಗೆ ಸದಾ ನಿನ್ನದೇ ಚಿಂತೆ.. 
ಬಾ ಸೇರಿಬಿಡು ಈ ತೋಳಲಿ ಒಮ್ಮೆ 
ನದಿ ಸಾಗರ ಬೆರೆತಂತೆ.. 
ನಾಚುತಿರಲು ನಾ ನವಿಲಿನಂತೆ, 
ನಿನ್ನ ಸುಂದರ ನಯನಗಳೇ,  
ದೃಷ್ಟಿ ಬೊಟ್ಟಾಗಿವೆಯಂತೆ.. 
ಈ ಸುಂದರ ಹೂನಗೆಗೆ ಕಾರಣ ನೀನಂತೆ, 
ಗಲ್ಲದ ಮೇಲಿನ ಕೆಂಪನೆಯ ಹೊಂಬೆಳಕಿಗೂ, 
ನಿನದೆ ಸವಿ ನೆನಪು ಎಡಬಿಡದೆ ಕಾಡಿದೆಯಂತೆ.. 
ತುಟಿಯಂಚಲಿ ನಗು ಸೂಸಿದೆ ಕೆಂದಾವರೆಯಂತೆ, 
ಮನಸು ಅರಳಿ ಕಂಪ ಸೂಸಿದೆ, 
ನೀಲಾಕಾಶದಲಿ ನಾವಿಬ್ಬರು ಧ್ರುವ ತಾರೆಗಳಾದಂತೆ.. ❤️
 ಒಲವ ಸಂದೇಶ 
#love #couples #madeforeachother #happiness #everloved #longlasting #loveforlife #togetherforever
ಕಣ್ಮನ ಸೆಳೆವ ಭ್ರಮರದಂತೆ,  
ಈ ಹೂವಿಗೆ ಸದಾ ನಿನ್ನದೇ ಚಿಂತೆ.. 
ಬಾ ಸೇರಿಬಿಡು ಈ ತೋಳಲಿ ಒಮ್ಮೆ 
ನದಿ ಸಾಗರ ಬೆರೆತಂತೆ.. 
ನಾಚುತಿರಲು ನಾ ನವಿಲಿನಂತೆ, 
ನಿನ್ನ ಸುಂದರ ನಯನಗಳೇ,  
ದೃಷ್ಟಿ ಬೊಟ್ಟಾಗಿವೆಯಂತೆ.. 
ಈ ಸುಂದರ ಹೂನಗೆಗೆ ಕಾರಣ ನೀನಂತೆ, 
ಗಲ್ಲದ ಮೇಲಿನ ಕೆಂಪನೆಯ ಹೊಂಬೆಳಕಿಗೂ, 
ನಿನದೆ ಸವಿ ನೆನಪು ಎಡಬಿಡದೆ ಕಾಡಿದೆಯಂತೆ.. 
ತುಟಿಯಂಚಲಿ ನಗು ಸೂಸಿದೆ ಕೆಂದಾವರೆಯಂತೆ, 
ಮನಸು ಅರಳಿ ಕಂಪ ಸೂಸಿದೆ, 
ನೀಲಾಕಾಶದಲಿ ನಾವಿಬ್ಬರು ಧ್ರುವ ತಾರೆಗಳಾದಂತೆ.. ❤️
 ಒಲವ ಸಂದೇಶ 
#love #couples #madeforeachother #happiness #everloved #longlasting #loveforlife #togetherforever