ಒಡೆದ ಕನ್ನಡಿ ಮಾತನಾಡದು ಏನನು ಮುರಿದ ಮನಸ್ಸು ಮೌನವೇ ಕನ್ನಡಿಯ ಚೂರುಗಳು ನಿನ್ನ ಬಿಂಬವ ಚೂರಾಗಿಸಿವೆ ಎದೆಯಲ್ಲುಳಿದ ನಿನ್ನ ನೆನಪು ಮಸುಕಾಗುತಿದೆ ಕನಸಿಲ್ಲದೆ ಕಂಗಳು ಬರಿದಾಗಿವೆ ವಿರಹದ ಮುಳ್ಳು ಎದೆಗೆ ಚುಚ್ಚಿವೆ ನಿನ್ನೊಲವ ಪಡೆವಲ್ಲಿ ನಾ ಸೋತೆ ನೀ ನನ್ನಬಾಳ ಹಣತೆ ಆರಿಸಿ ಹೋದೆ ಅಗಸದ ತುಂಬ ಚುಕ್ಕಿಗಳಂತೆ ಸಾಗರದ ತುಂಬ ನೀರಂತೆ ಭುವಿಯ ತುಂಬ ನಮ್ಮೊಲವಿನ ಗೀತೆಯಂತೆ ಅದರ ತುಂಬ ಸಂತಸದ ಸವಿ ನೆನಪಿನ ಬುತ್ತಿಯಂತೆ ನೀನಿಲ್ಲದೇ ಸಂತೈಸಲು ಸಾವಿರಾರು ಹೃದಯಗಳು ಆದರೂ ಮನ ಬಯಸುವದು ನಿನ್ನದೇ ಸ್ಪರ್ಶವ ಪ್ರೀತಿ ಮರೆಯಲು ಜಗವ ಪ್ರೀತಿಸಬಹುದು ಆದರೆ ನಿನ್ನ ಮರೆಯಲು ಜಗವೇ ಸಾಲದು. #yqjogi_kannada #yqquoteslove #krantadarshi ಒಡೆದ ಮನದ ಅಳಲು