Nojoto: Largest Storytelling Platform

ಬದುಕಿನ ಪಯಣದಲಿ ಬಯಕೆಗಳ ಕಾರ್ಮೋಡ ಬರಿದಾದ ಮನಗಳಲಿ ಬಡವಾದ ಜ

ಬದುಕಿನ ಪಯಣದಲಿ
ಬಯಕೆಗಳ ಕಾರ್ಮೋಡ
ಬರಿದಾದ ಮನಗಳಲಿ
ಬಡವಾದ ಜೀವ

ಬೇಟೆಯಾಡಲು ಹೊರಟಿದೆ
ಬೆಂಬತ್ತಿದ ಹಸಿವುಗಳ
ಬಿಟ್ಟು ಬಿಡದೆ ಕಾಡಿದೆ
ಭೃಂಗದ ಬೆನ್ನೇರಿದ ನೋವ

ಬಿಸಿಲಿನ ಬೇಗೆಯಲೂ
ಬೊಬ್ಬರಿಯುತಿದೆ ಹಸಿವು
ಬೇಯಿಸಿದ ತುತ್ತಿನ ಪಾತ್ರೆಗೂ
ಬರಬಂದಿದೆ ಸಹಿಸಲಾರದೆ ನೋವ

ಬಾಳಿನಲಿ ಹುಡುಕುತಿದೆ ಆನಂದವ
ಬರಬಾರದೆ ಸಂಕಷ್ಟಗಳಿಗೂ ಬರ 
ಬಿಟ್ಟು ಹೋಗಲಿ ನಮ್ಮೆಲ್ಲ‌ ನೋವ
ಬಾಡಿ ಹೋಗದಿರಲಿ ಬಾಳಿನ ಸಂತಸ

ಬದುಕಿನ ದೋಣಿಯಲಿ ಮುಳುಗೇಳಿ
ಬಯಸದೆ ಬಂದ ಕನಸುಗಳ
ಬೀಗುತಾ ಹೊರಟಿರುವೆ  
ಬೇಕಿರುವ ನನಸುಗಳ ಹರಸುತಾ
ಬದುಕಿನ ನೌಕೆಯಲಿ... #ಬದುಕಲುನೂರುದಾರಿ #ಬದುಕು #ಜೀವನದಹಾದಿ #yqmandya #yqkannada
ಬದುಕಿನ ಪಯಣದಲಿ
ಬಯಕೆಗಳ ಕಾರ್ಮೋಡ
ಬರಿದಾದ ಮನಗಳಲಿ
ಬಡವಾದ ಜೀವ

ಬೇಟೆಯಾಡಲು ಹೊರಟಿದೆ
ಬೆಂಬತ್ತಿದ ಹಸಿವುಗಳ
ಬಿಟ್ಟು ಬಿಡದೆ ಕಾಡಿದೆ
ಭೃಂಗದ ಬೆನ್ನೇರಿದ ನೋವ

ಬಿಸಿಲಿನ ಬೇಗೆಯಲೂ
ಬೊಬ್ಬರಿಯುತಿದೆ ಹಸಿವು
ಬೇಯಿಸಿದ ತುತ್ತಿನ ಪಾತ್ರೆಗೂ
ಬರಬಂದಿದೆ ಸಹಿಸಲಾರದೆ ನೋವ

ಬಾಳಿನಲಿ ಹುಡುಕುತಿದೆ ಆನಂದವ
ಬರಬಾರದೆ ಸಂಕಷ್ಟಗಳಿಗೂ ಬರ 
ಬಿಟ್ಟು ಹೋಗಲಿ ನಮ್ಮೆಲ್ಲ‌ ನೋವ
ಬಾಡಿ ಹೋಗದಿರಲಿ ಬಾಳಿನ ಸಂತಸ

ಬದುಕಿನ ದೋಣಿಯಲಿ ಮುಳುಗೇಳಿ
ಬಯಸದೆ ಬಂದ ಕನಸುಗಳ
ಬೀಗುತಾ ಹೊರಟಿರುವೆ  
ಬೇಕಿರುವ ನನಸುಗಳ ಹರಸುತಾ
ಬದುಕಿನ ನೌಕೆಯಲಿ... #ಬದುಕಲುನೂರುದಾರಿ #ಬದುಕು #ಜೀವನದಹಾದಿ #yqmandya #yqkannada
divakard3020

DIVAKAR D

New Creator