ಬದುಕಿನ ಪಯಣದಲಿ ಬಯಕೆಗಳ ಕಾರ್ಮೋಡ ಬರಿದಾದ ಮನಗಳಲಿ ಬಡವಾದ ಜೀವ ಬೇಟೆಯಾಡಲು ಹೊರಟಿದೆ ಬೆಂಬತ್ತಿದ ಹಸಿವುಗಳ ಬಿಟ್ಟು ಬಿಡದೆ ಕಾಡಿದೆ ಭೃಂಗದ ಬೆನ್ನೇರಿದ ನೋವ ಬಿಸಿಲಿನ ಬೇಗೆಯಲೂ ಬೊಬ್ಬರಿಯುತಿದೆ ಹಸಿವು ಬೇಯಿಸಿದ ತುತ್ತಿನ ಪಾತ್ರೆಗೂ ಬರಬಂದಿದೆ ಸಹಿಸಲಾರದೆ ನೋವ ಬಾಳಿನಲಿ ಹುಡುಕುತಿದೆ ಆನಂದವ ಬರಬಾರದೆ ಸಂಕಷ್ಟಗಳಿಗೂ ಬರ ಬಿಟ್ಟು ಹೋಗಲಿ ನಮ್ಮೆಲ್ಲ ನೋವ ಬಾಡಿ ಹೋಗದಿರಲಿ ಬಾಳಿನ ಸಂತಸ ಬದುಕಿನ ದೋಣಿಯಲಿ ಮುಳುಗೇಳಿ ಬಯಸದೆ ಬಂದ ಕನಸುಗಳ ಬೀಗುತಾ ಹೊರಟಿರುವೆ ಬೇಕಿರುವ ನನಸುಗಳ ಹರಸುತಾ ಬದುಕಿನ ನೌಕೆಯಲಿ... #ಬದುಕಲುನೂರುದಾರಿ #ಬದುಕು #ಜೀವನದಹಾದಿ #yqmandya #yqkannada