Nojoto: Largest Storytelling Platform

ನೀನೆ ಪ್ರೀತಿ ಮಾಡಿದ ಹೂವು ಲಾಲಿಸಲಿಲ್ಲವೇತಕೋ.! ನೀನೇ ಇಷ್ಟ

ನೀನೆ ಪ್ರೀತಿ ಮಾಡಿದ ಹೂವು
ಲಾಲಿಸಲಿಲ್ಲವೇತಕೋ.!
ನೀನೇ ಇಷ್ಟ ಪಟ್ಟ ಹೂವು 
ಮುಡಿಯಲಿಲ್ಲ ಎತಕೋ..!

ಎನು ಕಾಣದಾದ ಮಾಯೆ
ಎದೆಯ ಗೂಡಿಗಿಟ್ಟೆಯಾ?
ಬದಿಗೆ ಸರಿದು,ಉರಿಯನಿಟ್ಟು
ಸೆದೆಯ ತಂದು ಸುರಿದೆಯಾ?

ಕಾಣದಂತೆ ಗಾಯವಾಗಿ
ನೋವು ಎಲ್ಲೆ ಮೀರಿದೆ..
ಎಸು ಉಪಚಾರ ಮಾಡಿದರೂ
ತಾಸು ಬದುಕಲೊಲ್ಲದು..!

ಪ್ರೀತಿಯ ಕುಸುಮ ನಾನು
ಆಳದಲಿ ತುಸು ಅಳಲಿದೆ
ನೀನೇ ಆಡಿದಾಟಕಾಗೆ
ನೊಂದು ನಾನು ಬಳಲಿದೆ.!

🖋-ಲಕುಮಿಕಂದ ಮುಕುಂದ #ಪ್ರೀತಿಯ ಹೂವು
ನೀನೆ ಪ್ರೀತಿ ಮಾಡಿದ ಹೂವು
ಲಾಲಿಸಲಿಲ್ಲವೇತಕೋ.!
ನೀನೇ ಇಷ್ಟ ಪಟ್ಟ ಹೂವು 
ಮುಡಿಯಲಿಲ್ಲ ಎತಕೋ..!

ಎನು ಕಾಣದಾದ ಮಾಯೆ
ಎದೆಯ ಗೂಡಿಗಿಟ್ಟೆಯಾ?
ಬದಿಗೆ ಸರಿದು,ಉರಿಯನಿಟ್ಟು
ಸೆದೆಯ ತಂದು ಸುರಿದೆಯಾ?

ಕಾಣದಂತೆ ಗಾಯವಾಗಿ
ನೋವು ಎಲ್ಲೆ ಮೀರಿದೆ..
ಎಸು ಉಪಚಾರ ಮಾಡಿದರೂ
ತಾಸು ಬದುಕಲೊಲ್ಲದು..!

ಪ್ರೀತಿಯ ಕುಸುಮ ನಾನು
ಆಳದಲಿ ತುಸು ಅಳಲಿದೆ
ನೀನೇ ಆಡಿದಾಟಕಾಗೆ
ನೊಂದು ನಾನು ಬಳಲಿದೆ.!

🖋-ಲಕುಮಿಕಂದ ಮುಕುಂದ #ಪ್ರೀತಿಯ ಹೂವು