** ನೆನಪ ತಂಪು ** ----------------------- ಕನಸದು ಕನವರಿಸುತಿದೆ ನಿನ್ನ ಮನಸ್ಸ ಸೇರಲು ನಿನ್ನ ಹುಡುಕುತ ದಣಿದಿದೆ ಕಂಗಳು ಎಲ್ಲಿಹುದೆನ್ನ ಬಾಳ ನೆರಳು......!! ಎದೆಯಲಿ ವಿರಹದ ಸಾವಿರ ನೋವಿನ ಯಾತನೆ ಮನಗಳ ಮಿಲನವಾಗದೇ ಕೊರಗಿದೆ ಅಗಲಿಕೆಯ ಯಾತನೆ.....!! ಕಾರಣ ನಿನ್ನ ಮುನಿಸಿನ ಸುಳಿಗಾಳಿಯ ಮಂಪರು ಕನಸಿಗೂ ಕೊನೆಯಿರದ ಬರೀಯ ನೆನಪುಗಳ ತಂಪಿನ ನೆಂಪರು........!! ನಿನ್ನ ಸೇರುವ ಕಳವಳ ಮನದೊಳಗಿನ ಹಂಬಲ ಪ್ರೀತಿ ನಂಬಿಕೆಯ ಆಳ ಅರಿಯಲು ಕನಸ ಬೆಂಬಲ.......!! ಅರಿಯದ ಬಂಧವು ಜೊತೆಯಾದೊಡೆ ನಗುವ ನಲಿವಿನ ಕರೆಯೊಲೆ ಸಲುಗೆ ಸ್ನೇಹದಿ ಒಲವ ನೆರಳಲಿ ಹೀಗೆ ಬರೆದೆ ಮನದೋಲೆ..........!! #ನೆನಪುಗಳು #ನನ್ನವನು #ಒಲವಯಾನ #ನಾನು_ನೀನು #ನನ್ನ_ಬರಹ #yqlovequotes #krantadarshikanti