Nojoto: Largest Storytelling Platform

ತಾಯಿ ಇರದ ಬದುಕೇ ಮೈ ಮರೆಯಬೇಡ ಅವಳ ಕೊಟ್ಟ ಉಸಿರು ನೀ ಮೆರೆಯ

ತಾಯಿ ಇರದ ಬದುಕೇ ಮೈ ಮರೆಯಬೇಡ
ಅವಳ ಕೊಟ್ಟ ಉಸಿರು ನೀ ಮೆರೆಯಬೇಡ
ರಕುತ ಬಸಿದು ಸಾಕಿದಳು ನೀ ಅಳಿಯಬೇಡ
ಕಣ್ಣೀರಿಗೂ ಬರವಿದೆ ಅವಳ ನೋಯಿಸಬೇಡ

ಲೋಕಕ್ಕೆಲ್ಲಾ ಅವಳು ತಾಯಿ ತಬ್ಬಲಿಯಾಗದಿರಲಿ
ತನ್ನವರೆಂದು ಬಗೆದು ಲೋಕಕ್ಕೆ ಅನ್ನವ ನೀಡಿದವಳು
ತುತ್ತು ಅನ್ನವ ತಿನ್ನದೆ ಹಸಿವ ತೀರಿಸಿದಳು ಅವಳು
ಕೈಒಡ್ಡಿ ಬೇಡಿಹಳು ನಿನ್ನ ಹೆತ್ತ ತಪ್ಪಿಗೆ ನಗುತಿಹಳು

ಹಣ ಎಷ್ಚಿದ್ದರೇನು ತಾಯಿ ಋಣವು ತೀರುವುದೇ
ಹಸಿದ ಹೊಟ್ಟೆಯಲಿ ದನಿಗೂ ದಣಿವು ಆಗದಿರುವುದೇ
ಮಗನೇ ಸರ್ವಸ್ವವೆಂದವಳು ಶವವಾಗಿ ಹೋಗಿಹಳು
ಮಣ್ಣಾಗೋ ಹೊತ್ತಿನಲಿ ಕಂಬನಿ ಕಾಡದಿರುವುದೇ... ತಾಯಿ...


#yqdvkrddots 
#yqjogi_kannada 
#yqmother 
#yqmotherslove 
#ಕನ್ನಡ_ಬರಹಗಳು
ತಾಯಿ ಇರದ ಬದುಕೇ ಮೈ ಮರೆಯಬೇಡ
ಅವಳ ಕೊಟ್ಟ ಉಸಿರು ನೀ ಮೆರೆಯಬೇಡ
ರಕುತ ಬಸಿದು ಸಾಕಿದಳು ನೀ ಅಳಿಯಬೇಡ
ಕಣ್ಣೀರಿಗೂ ಬರವಿದೆ ಅವಳ ನೋಯಿಸಬೇಡ

ಲೋಕಕ್ಕೆಲ್ಲಾ ಅವಳು ತಾಯಿ ತಬ್ಬಲಿಯಾಗದಿರಲಿ
ತನ್ನವರೆಂದು ಬಗೆದು ಲೋಕಕ್ಕೆ ಅನ್ನವ ನೀಡಿದವಳು
ತುತ್ತು ಅನ್ನವ ತಿನ್ನದೆ ಹಸಿವ ತೀರಿಸಿದಳು ಅವಳು
ಕೈಒಡ್ಡಿ ಬೇಡಿಹಳು ನಿನ್ನ ಹೆತ್ತ ತಪ್ಪಿಗೆ ನಗುತಿಹಳು

ಹಣ ಎಷ್ಚಿದ್ದರೇನು ತಾಯಿ ಋಣವು ತೀರುವುದೇ
ಹಸಿದ ಹೊಟ್ಟೆಯಲಿ ದನಿಗೂ ದಣಿವು ಆಗದಿರುವುದೇ
ಮಗನೇ ಸರ್ವಸ್ವವೆಂದವಳು ಶವವಾಗಿ ಹೋಗಿಹಳು
ಮಣ್ಣಾಗೋ ಹೊತ್ತಿನಲಿ ಕಂಬನಿ ಕಾಡದಿರುವುದೇ... ತಾಯಿ...


#yqdvkrddots 
#yqjogi_kannada 
#yqmother 
#yqmotherslove 
#ಕನ್ನಡ_ಬರಹಗಳು
divakard3020

DIVAKAR D

New Creator