ಸಾಲು ದೀಪಗಳ ಸರತಿಯಲಿ ನಾ ನಿಂತು ಕಾಯುತಿರಲು ಸಾಲು ಸಾಲಾಗಿ ವರುಷಗಳು ಕಂಡು ಕಾಣದಂತೆ ಉರುಳುತಿರಲು ಸಾಲಾಗಿ ಬೆಳಗುವ ಬೆಳಕಿನೊಳಗೆ ಹೊಸ ಮಿಂಚು ಸಂಚರಿಸಿರಲು ಸಾಲದಾಗಿ ಹೋಯ್ತು ಈ ಸಮಯವು ಅವನೊಲವ ಪಡೆಯೋ ಹಂಬಲದೊಳಗೆ ಸಾಲುಗಳ ಸಾಲಿನಲಿ ಸಾವಿರಾರು ಮುಚ್ಚಿಟ್ಟ ಪದಗಳು ಅವನ ಹೆಸರ ಹೇಳಿವೆ ಸಾಲಿನ ಈ ವರುಷವಾದರೂ ಸೇರಬೇಕು ನಾ ಅವನೊಳಗಿನ ಸಂಭ್ರಮದೊಳಗೆ ಸಾಲಾಗಿ ನಿಂತು ಹರಿಸಬೇಕು ಬೆಳಕನು ಪ್ರತಿಕ್ಷಣವೂ ದೀಪಾವಳಿಯ ದೀಪಗಳಂತೆ....!! #ದೀಪಾವಳಿಯ_ಶುಭಾಶಯಗಳು #ದೀಪಾವಳಿ_ಸಂಭ್ರಮ #ದೀಪಗಳ_ಹಬ್ಬ #ದೀಪ #ಅವನು #ನನ್ನವನು #krantadarshikanti