Nojoto: Largest Storytelling Platform

ಪ್ರೀತಿಯ ೨೦೨೧ ಕ್ಷಣಗಳುರುಳಿದವು ದಿನಗಳ

                ಪ್ರೀತಿಯ ೨೦೨೧

ಕ್ಷಣಗಳುರುಳಿದವು ದಿನಗಳರಳಿದವು ದಿನಗಳರಳಿ ತಿಂಗಳು ಮುಳುಗಿದವು
ವರುಷ ಕಳೆಯಿತು ಹರುಷ ತಂದಿತು ಮನದಲ್ಲಿ ನವ ಭರವಸೆ ಮೂಡಿತು
ಬದುಕಿನ ಹೊಸ ಹೆಜ್ಜೆಯ ಹಾದಿಗೆ  ಹಸಿರಂತೆ ಕಂಗೊಳಿಸಿ ಆಹ್ವಾನಿಸಿತು
ಕಷ್ಟ ಕಾರ್ಪಣ್ಯಗಳ ಮನದ ಗಂಟು ಮೂಲೆ ಸೇರಿಸಲು ಮನ ಮಿಡಿದಿತು

ಬಾಳು ನವ ನೋಟ ಅರಸಿತು ಮನದೊಳೆಲ್ಲಾ  ಸಂತಸ ಅರಳಿಸಿತು
ಕಂಬನಿ ಮರುಗಿ  ಕಣ್ಮರೆಯಾದ ಕಣ್ಮಣಿಗಳಿಗೆ ಆಶ್ರತರ್ಪಣೆಯಾಯಿತು
ಜೀವನ ನವ ಮುಗಿಲಲರಳಿತು  ಕಂಪಿನೊಂದಿಗೆ ಸಿಹಿ ನೆನಪಾಯಿತು
ನೆಪದಲ್ಲುಳಿದ ಬಂಧನಗಳಳಿದವು ನೂರಾರು ಆಸೆಗಳು ಗರಿಗೆದರಿದವು

ಅಕ್ಕರೆಯಲ್ಲಿ ಆನಂದ ಅರಳಿತು ಮನದೊಳೆಲ್ಲಾ  ಒಳಿತು ಬಯಸಿತು
ಒಗ್ಗಟ್ಟಿಗೆ ಒಲವು ನೀಡಿತು ಒಲುಮೆಯ ಒಗ್ಗರೆಣ್ಣಗೆ ಒಡಕುರುಳಿತು
ಕನಸಿಗೆ ಭರವಸೆ ನೀಡಿತು ನನಸಿನ ನವಹಾದಿಗೆ ಮುನ್ನುಡಿಯಾಯಿತು
ನಗುವಿನಂದವ ಹಂಚುತಾ ಮನುಜರೊಂದಿಗೊಂದಾಗಿ ಮುನ್ನಡೆಯೋಣ

ಹೊಸವರ್ಷದ ಈ  ಶುಭಗಳಿಗೆ  ಸಾಧನೆಗಳು ಸಾಕ್ಷಿಯಾಗಲಿ
ಬಂಧುಬಾಂದವರೆಲ್ಲ ಸಿಹಿಯಂತೆ  ಪ್ರತಿಕ್ಷಣವೂ ಖುಷಿಯಾಗಿರಲಿ
ಜಗದ ತುಂಬೆಲ್ಲಾ ಮನುಜನ ಮಂಥನದ  ಹಾದಿಯು ಹೊಸತಾಗಲಿ
ಮನ್ವಂತರದ ಕ್ಷಣಗಳೆಲ್ಲಾ ಪ್ರಕೃತಿಯಂತೆ ನಳನಳಿಸುತ್ತಾ ನಲಿವಾಗಲಿ ಪ್ರೀತಿಯ ೨೦೨೧ನ್ನು ಹಳೆತನ್ನು ಮರೆತು ಹೊಸತನ್ನು ನಗುವಿನೊಂದಿಗೆ ಸ್ವಾಗತಿಸೋಣ ....ಎಲ್ಲರಿಗೂ ಹೊಸವರ್ಷದ ಅನುಗಾಲದ ಹಾರ್ದಿಕ ಶುಭಾಶಯಗಳು
#ದಿವಾಕರ್  #೨೦೨೧ #ಹೊಸವರ್ಷ ದ #ಶುಭಾಶಯಗಳು #ಸ್ವಾಗತ #ಕನ್ನಡ #yqjogi #yqmandya

divakard3020

DIVAKAR D

New Creator