"ಹೆಜ್ಜೆ ಗುರುತು" ಅದಾವುದೋ ಕಡೆಯಿಂದ ಬೀಸೈತಿ ತಂಗಾಳಿ ನನ್ನ ಎದೆಯಲ್ಲಿ ಮೂಡಿಸಿತು ರಂಗಿನ ಓಕುಳಿ ತಟ್ಟನೆ ಎಚ್ಚೆತ್ತ ಎನ್ನ ಮನವು ಕಂಡದ್ದು ಚೆಂದಣವಾಗಿ ಮೂಡಿಹ ಹೆಜ್ಜೆಗುರುತು ಅದಾರು ಮೂಡಿಸಿದರೋ ಆ ಹೆಜ್ಜೆ ಗುರುತು! ಪುಟ್ಟ ಪುಟ್ಟ ಬೆರಳುಗಳ ಕೋಮಲ ಪಾದದ ನವಿರಾದ ಭಾಷೆಯ ತಿಳಿಸೋ ಆ ಹೆಜ್ಜೆ ಗುರುತು ಎನ್ನ ಎದೆಯಲ್ಲೇ ಇಟ್ಟಂತಿದೆ ಆ ಹೆಜ್ಜೆ ಗುರುತು ಎನ್ನ ಹೃದಯವನ್ನೇ ಮಿಡಿಸಿದಂತಿದೆ ಆ ಹೆಜ್ಜೆ ಗುರುತು! #yqಹರೀಶ್ ಕಜೆ