** ಕೆಣಕದಿರು ಗೆಳೆಯ ** 🌺🌺🌺🌺🌺🌺🌺🌺 ಆ ತಂಪಿನ ಸಂಜೆಯಲಿ ಸವಿಗಂಪಿನಲಿ ತನುವರಳಿಸಿ ನಿನ್ನ ನೆನಪನು ಎದೆಗೆ ಮರಳಿಸಿದ ಮಳೆಯ ಹನಿಗೊಂದು ಮುತ್ತಿನ ಮಾತು ಬೆಳದಿಂಗಳ ರಾತ್ರಿಯಲಿ ಕಡುಕಂಗಳ ಕಾಂತಿಯ ಹರಿಸಿ ನಿನ್ನ ರೂಪ ಲಾವಣ್ಯವ ಮನದಿ ವರೆಸಿದ ಚಂದ್ರನಿಗೊಂದು ಮುತ್ತಿನ ಮಾತು ಸುಮುದ್ರದ ಅಲೆಗಳಲಿ ಕರೆತಂದ ತಂಪು ತಂಗಾಳಿಯುಳಿಸಿ ನನ್ನ ನಿದಿರೆಯ ಕದ್ದು ನಿನ್ನ ನೆನಪಿನ ಅಲೆಯಾಗಿಸಿದ ರಾತ್ರಿಯ ತಂಪಿಗೊಂದು ಮುತ್ತಿನ ಮಾತು ಮನದೊಳಗಿನ ನೋವಿನ ಕೋಡಿಯಲಿ ಕಾಡುವ ಕನಸುಗಳ ತಂಪಿನ ಅಂಗಳದಿ ಎಷ್ಟು ಆಡಿದರೂ ಮುಗಿಯದು ಆ ಮುತ್ತಿನ ಮಾತುಗಳು ಎಷ್ಟು ಕೊಟ್ಟರೂ ತಣಿಯದು ಅಂಥ ಮುತ್ತಿನ ಅಮಲದು ಬಚ್ಚಿಡಲಾರೆ ಗೆಳೆಯ, ಇನ್ನೊಮ್ಮೆ ಕೆಣಕದಿರು ಹೀಗೆ......!! ** ಕೆಣಕದಿರು ಗೆಳೆಯ ** ಆ ತಂಪಿನ ಸಂಜೆಯಲಿ ಸವಿಗಂಪಿನಲಿ ತನುವರಳಿಸಿ ನಿನ್ನ ನೆನಪನು ಎದೆಗೆ ಮರಳಿಸಿದ ಮಳೆಯ ಹನಿಗೊಂದು ಮುತ್ತಿನ ಮಾತು ಬೆಳದಿಂಗಳ ರಾತ್ರಿಯಲಿ