Nojoto: Largest Storytelling Platform

ಮಳೆ ಇಷ್ಟ ನಿಜ ಮಳೆ ಬಂದಾಗ ಕೊಡೆ ಹಿಡಿವರು ನಿಜ ಮಳೆಯೊಳಗೆ

ಮಳೆ ಇಷ್ಟ ನಿಜ 
ಮಳೆ ಬಂದಾಗ ಕೊಡೆ ಹಿಡಿವರು ನಿಜ
ಮಳೆಯೊಳಗೆ ಮಳೆಯಾಗಿ ಕರಗುವದು ಮನಸ್ಸು
ಮಳೆಯ ಹನಿಗಳಲಿ ಕಣ್ಣೀರು ಕಾಣದಾಗುವದು
ಮಳೆಯು ಮೋಸ ಮಾಡದು ಬರುವದು ಇಳೆಯ ಕಾಣಲು
ಮಳೆಯೊಳಗೆ ಮಳೆಯಾಗಿ ಹೋಗಿರುವೆ ನಾನು
ಮಳೆಯ ನಟ್ಟನಡುವೆ ನೀರಾಗಿ ನಿಂತಿರುವೆ ಕೊಡೆಹಿಡಿದು
ಮಳೆಯ ನೀರಲಿ ಅರ್ಧ ದೇಹ ಮುಳುಗಿದ ಮೇಲೆ 
ಮಳೆಗಾಗಿ ಕೊಡೆಹಿಡಿದೇನು ಲಾಭವಿಲ್ಲ
ಮಳೆಯ ಆರ್ಭಟ ಮನದ ಆಕ್ರಂದನವ ಮರೆಸಿದೆ
ಮಳೆಯ ಗುಡುಗು ಸಿಡಿಲು ಮರೆಸಿದೆ ಎದೆಯ ಕರೆಯ
ಮಳೆಯು ತೊರೆದ ತೊಳಲಾಟವ ಹುಡುಕಿ ಹೊರಟಿಹೆ‌ ನಾನು
ಮಳೆಯ ಜೊತೆಗೆ ಕಾಣದ ದಾರಿಯ ಅರಸುತ
ಮಳೆಗುಂಟು ಕಾಲ..ನೊಂದ ಮನಕ್ಕಿಲ್ಲ ಯಾವ ಕಾಲಾನೂಕಾಲ.....!! #ಮಳೆಬರಹ #ಮಳೆಗಾಲದವಿರಹ #ಮಳೆಮಾತು #ಮಳೆಯಲಿಮೌನವಾಗಿ #yqrainspeaks #yqrainquotes #krantadarshikanti