Nojoto: Largest Storytelling Platform

White ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು

White ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.

ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.
1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.
2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.
3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.
4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.
5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.

ದೇವರು: ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.
ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.
ದೇವರು: ತಥಾಸ್ತು.
ಹೆಂಡತಿಯು ಒಂದು ಮೊಬೈಲ್ ಫೋನ್ ಆಗಿ ಬದಲಾದಳು😁😁😁

©DISHU

dishu5576802879154

DISHU

New Creator