Nojoto: Largest Storytelling Platform

** ವಿರಾಮ ** 🌹🌹🌹🌹🌹🌹 ಭೋರ್ಗರೇವ ಸಾಗರದಿ ಶಾಂತತೆಯ ಹ

** ವಿರಾಮ **
🌹🌹🌹🌹🌹🌹
ಭೋರ್ಗರೇವ ಸಾಗರದಿ ಶಾಂತತೆಯ
ಹುಡುಕಾಟದಲ್ಲಿದ್ದ ಮೌನ ಜೀವಕ್ಕೆ
ಯಾವ ಜಡಿ ಮಳೆಯ ತಂಪೂ ಸಿಗದೇ
ಯಾವ ಸಂಪಿಗೆಯ ಕಂಪೂ ಸೂಸದೇ
ಮಿಡುಕಾಟದೊಳಗೆ ಜೀವ ಕಲ್ಲಾಗಿ ಹೋಗದೇ
ಕೇವಲ‌ ನೆನಪಿನ ಅಲೆಗಳಲಿ ತೇಲಿಸಿ ಹೋದವನು ನೀನು....!!

ನಿನ್ನ ಮುನ್ನುಡಿಯ ನಿರೀಕ್ಷೆಯಲ್ಲಿದ್ದ
ನನ್ನ ಹೃದಯ ಭಾವಕ್ಕೆ
ಯಾವ ಸುಳಿವೂ ಸಿಗದೇ
ಯಾವ ಮುನ್ಸೂಚನೆಯೂ ಕೊಡದೇ
ಒಮ್ಮೆಯಾದರೂ ಹಿಂತಿರುಗಿ ನೋಡದೇ
ಪೂರ್ಣ ವಿರಾಮವಿಟ್ಟು ಹೋದವನು ನೀನು.....!! #ಮಂದಾರ #krantadarshikanti #yqlove_feelings_emotions #yqloveqoutes #ವಿರಾಮ ಇಟ್ಟವನು #ನನ್ನವನು