Nojoto: Largest Storytelling Platform

White ಪತಿಯೇ ಸಖನಾದಾಗ ಬರೆಯಲೆಂದು ಕುಳಿತೆ ಪ್ರೇಮ ಕಾವ್ಯ

White ಪತಿಯೇ ಸಖನಾದಾಗ


ಬರೆಯಲೆಂದು ಕುಳಿತೆ ಪ್ರೇಮ ಕಾವ್ಯವ

 ನೀ ಜೊತೆ ಇರೆ ಬಾಳ ಸಂಗಾತಿ

 ತನುಮನವೆಲ್ಲ ಸಾಹಿತ್ಯವೇ....

  ಸಂಭಾಷಣೆ ಸರಸವೆಲ್ಲ ಕವಿತೆಯೇ


ಯುಗವೊಂದು ಕ್ಷಣವಾಯಿತು ಸಖನೆ

ಪ್ರತಿಕ್ಷಣವನು ಪರಿಮಳವಾಗಿಸು ನಲ್ಲ

ಬಾಳ ಸಂಗಾತಿಯಾಗಿ ಬಾಳು ಬೆಳಗಿದೆ

ನವ್ಯ ಜೀವನ ನೀಡಿದೆ ನನಗಾಗಿ 


ಕಷ್ಟ ಸುಖದ ಹಾದಿಯಲ್ಲಿ ನಡೆಸಿದೆ 

ಅನುಭವದ ಖಜಾನೆ ರವಾನಿಸಿದೆ 

ನೆರಳಂತೆ ನೀ ಬಂದು ಪ್ರೇರೇಪಿಸಿದೆ 

ಅಪೂರ್ವ ಸಾಧನೆಗೆ ಕಾರಣವಾದೆ


ಮರೆಯಲೆಂತು ನಿನ್ನನು ಸುಮ್ಮನೆ 

ವಸಂತದ ಕೋಗಿಲೆ ಇಂಚರ ನೀನು

ಬಾಳ ಸಂಗೀತಕೆ ಭಾವ ಮೂಡಿಸಿ 

ರಾಗ ನುಡಿಸಿದೆ ನನ್ನ ದನಿಯಲಿ......

                           ಪಾರ್ವತಿ ಎಸ್ ಕಂಬಳಿ

©PARVATI KAMBLI #love_shayari
White ಪತಿಯೇ ಸಖನಾದಾಗ


ಬರೆಯಲೆಂದು ಕುಳಿತೆ ಪ್ರೇಮ ಕಾವ್ಯವ

 ನೀ ಜೊತೆ ಇರೆ ಬಾಳ ಸಂಗಾತಿ

 ತನುಮನವೆಲ್ಲ ಸಾಹಿತ್ಯವೇ....

  ಸಂಭಾಷಣೆ ಸರಸವೆಲ್ಲ ಕವಿತೆಯೇ


ಯುಗವೊಂದು ಕ್ಷಣವಾಯಿತು ಸಖನೆ

ಪ್ರತಿಕ್ಷಣವನು ಪರಿಮಳವಾಗಿಸು ನಲ್ಲ

ಬಾಳ ಸಂಗಾತಿಯಾಗಿ ಬಾಳು ಬೆಳಗಿದೆ

ನವ್ಯ ಜೀವನ ನೀಡಿದೆ ನನಗಾಗಿ 


ಕಷ್ಟ ಸುಖದ ಹಾದಿಯಲ್ಲಿ ನಡೆಸಿದೆ 

ಅನುಭವದ ಖಜಾನೆ ರವಾನಿಸಿದೆ 

ನೆರಳಂತೆ ನೀ ಬಂದು ಪ್ರೇರೇಪಿಸಿದೆ 

ಅಪೂರ್ವ ಸಾಧನೆಗೆ ಕಾರಣವಾದೆ


ಮರೆಯಲೆಂತು ನಿನ್ನನು ಸುಮ್ಮನೆ 

ವಸಂತದ ಕೋಗಿಲೆ ಇಂಚರ ನೀನು

ಬಾಳ ಸಂಗೀತಕೆ ಭಾವ ಮೂಡಿಸಿ 

ರಾಗ ನುಡಿಸಿದೆ ನನ್ನ ದನಿಯಲಿ......

                           ಪಾರ್ವತಿ ಎಸ್ ಕಂಬಳಿ

©PARVATI KAMBLI #love_shayari