Nojoto: Largest Storytelling Platform

ಸುಮ್ಮನೆ ಮರೆಯಲಿ ನಿಂತು ನಗುತಲಿ ಮೆರಯುತಿದೆ ಮೇಲೆ ಮೇಲೇರೆ

ಸುಮ್ಮನೆ ಮರೆಯಲಿ ನಿಂತು
ನಗುತಲಿ ಮೆರಯುತಿದೆ ಮೇಲೆ 
ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆ

ಹಾರಿಬಿಟ್ಟ ಗಾಳಿಪಟದ ಸೂತ್ರದಂತೆ 
ಬದುಕು ಹರಿದಿದೆ ಏಳಬೀಳುಗಳ 
ಕಂಡು ಗಹಿಗಹಿಸಿ ನಗುತಿದೆ
ಶಾಂತಿಯ ಬಸಿದು  ನೆತ್ತರ ಹರಿಸದೆ
ಹರಕೆಯ ಬಲಿಯ ಪಡೆದಿದೆ

ತನ್ನ ಶಕ್ತಿಯ ಮೀರಿ ಅಗಾಧತೆಯಲಿ
ಮನುಕುಲವ ನರಳಿಸಿ ಮೂಕ ಪ್ರಾಣಿ
ಪಕ್ಷಿಗಳ ಬಲಿಯ ಬೇಡಿದೆ 
ನೋವು ನಲಿವು ಕೂಡಿರಲೆಂದು
ಕೊಂಚ ಉಳಿಸಿ ಎಲ್ಲ ಅಳಿಸಿ
ಸಿಹಿ ಕಹಿ ಬಾಳಿಗಿರಲೆಂದು
ಮನವನ್ನು ನೋವಿನಲೂ ಶೋದಿಸಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡ #yqmandya #yqoriginals #yqkannadapoems
ಸುಮ್ಮನೆ ಮರೆಯಲಿ ನಿಂತು
ನಗುತಲಿ ಮೆರಯುತಿದೆ ಮೇಲೆ 
ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆ

ಹಾರಿಬಿಟ್ಟ ಗಾಳಿಪಟದ ಸೂತ್ರದಂತೆ 
ಬದುಕು ಹರಿದಿದೆ ಏಳಬೀಳುಗಳ 
ಕಂಡು ಗಹಿಗಹಿಸಿ ನಗುತಿದೆ
ಶಾಂತಿಯ ಬಸಿದು  ನೆತ್ತರ ಹರಿಸದೆ
ಹರಕೆಯ ಬಲಿಯ ಪಡೆದಿದೆ

ತನ್ನ ಶಕ್ತಿಯ ಮೀರಿ ಅಗಾಧತೆಯಲಿ
ಮನುಕುಲವ ನರಳಿಸಿ ಮೂಕ ಪ್ರಾಣಿ
ಪಕ್ಷಿಗಳ ಬಲಿಯ ಬೇಡಿದೆ 
ನೋವು ನಲಿವು ಕೂಡಿರಲೆಂದು
ಕೊಂಚ ಉಳಿಸಿ ಎಲ್ಲ ಅಳಿಸಿ
ಸಿಹಿ ಕಹಿ ಬಾಳಿಗಿರಲೆಂದು
ಮನವನ್ನು ನೋವಿನಲೂ ಶೋದಿಸಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡ #yqmandya #yqoriginals #yqkannadapoems
divakard3020

DIVAKAR D

New Creator