ಸುಮ್ಮನೆ ಮರೆಯಲಿ ನಿಂತು ನಗುತಲಿ ಮೆರಯುತಿದೆ ಮೇಲೆ ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆ ಹಾರಿಬಿಟ್ಟ ಗಾಳಿಪಟದ ಸೂತ್ರದಂತೆ ಬದುಕು ಹರಿದಿದೆ ಏಳಬೀಳುಗಳ ಕಂಡು ಗಹಿಗಹಿಸಿ ನಗುತಿದೆ ಶಾಂತಿಯ ಬಸಿದು ನೆತ್ತರ ಹರಿಸದೆ ಹರಕೆಯ ಬಲಿಯ ಪಡೆದಿದೆ ತನ್ನ ಶಕ್ತಿಯ ಮೀರಿ ಅಗಾಧತೆಯಲಿ ಮನುಕುಲವ ನರಳಿಸಿ ಮೂಕ ಪ್ರಾಣಿ ಪಕ್ಷಿಗಳ ಬಲಿಯ ಬೇಡಿದೆ ನೋವು ನಲಿವು ಕೂಡಿರಲೆಂದು ಕೊಂಚ ಉಳಿಸಿ ಎಲ್ಲ ಅಳಿಸಿ ಸಿಹಿ ಕಹಿ ಬಾಳಿಗಿರಲೆಂದು ಮನವನ್ನು ನೋವಿನಲೂ ಶೋದಿಸಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡ #yqmandya #yqoriginals #yqkannadapoems