ಜಗವಿಮೋಚಕ - ೧೯೮ =========================== ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ ನೂರಾರು ಗೊಂದಲಗಳ ಗೂಡು ಅದುವೇ ಪ್ರಶ್ನೆಗಳು ಮೂಡಿತೇಕೆ ಮನದೊಳಗೆ ಉತ್ತರ ನಿರೀಕ್ಷಿಸಿದಿರ ಪ್ರಶ್ನೆಗಳಿಗೆದುರಾದವರ ಎದಯೊಳಗೆ ಹುಡುಕು ನೀ ನಿನ್ನೊಳಗೆ ಮರು ಪ್ರಶ್ನೆಗಳು ಬಾಯಿ ತೆರೆದು ನಿನ್ನೆದೆಗೆ ನಾಟುವ ಮುನ್ನ ದೊರೆಯಬಹದುತ್ತರ ಕಾಲನ ಕುಣಿಕೆ ಯಲಿ ಕಳೆಬರದಂತೆ ಕಳೆದು ಹೋಗುವುದೊರಳೆಗೆ ನಾನು ನನ್ನದೆಂಬ ಅಹಂಕಾರ ಅಡಗಿಸಿ ತಿಳಿನೀರಿನ ಝರಿಯಂತೆ ಸಾಗುತ್ತಿರಲಿ ಬಾಳು ಮಸಣದ ತೇರು ಹೆಗಲ ಮೇಲೆ ಎಳೆಯುವವರಗೆ ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ... ಜಗವಿಮೋಚಕ - ೧೯೮ ಮನದ ಪ್ರಶ್ನೆಗಳಿಗೇಕೆ ಹುಡುಕುವೇ ಉತ್ತರವ... #ಜಗವಿಮೋಚಕ #ದಿವಾಕರ್ #ಮನ #ಪ್ರಶ್ನೆ #ಕನ್ನಡ #ಕನ್ನಡಕವಿತೆ #yqjogi #yqthoughts