ಕನಸೆ ಕಾಡದಿರು ನೀ ಹೀಗೆ.... ಪದೆ ಪದೆ ಬಾರದಿರು ನೀ ಹುಸಿ ನಿರೀಕ್ಷೆಗಳ ತೋರಿ ಗಾಳಿ ಗೋಪುರದಂತೆ... ಅಗೊಮ್ಮೆ ಈಗೊಮ್ಮೆ ಮನದಲಿ ಆಸೆ ಗೋಪುರ ಕಟ್ಟಿಸಿ ನನಸಾಗೋ ಸಮಯದಿ ನಿರಾಸೆ ನೀ ತೋರದಿರು... ನಂದಗೋಕುಲದಂತ ಮನಸಿನಲಿ ಪ್ರತಿ ಕ್ಷಣ ಯುದ್ಧ ಆಂತರ್ಯದಲಿ ನಿನ್ನಿಂದ ಹಟ ಸಾದಿಸಿ ಫಲವಿಲ್ಲ ನೀ ಸೋಲುವುದು ಖಚಿತ.... ಎಂದೆಂದಿಗೂ ಬರಲಾರೆನು ನಿನ್ನ ಹಿಂಬಾಲಿಸಿ ನನ್ನ ಪ್ರೀತಿಯ ದಿಕ್ಕರಿಸಿ.... ಬಾಳಬೇಕಿದೆ ನನಗೆ ನನ್ನವರ ಸಂತಸವ ಅನುಸರಿಸಿ.... ಕೈ ಮುಗಿದು ಬೇಡುವೆನೊಮ್ಮೆ ಮತ್ತೆ ಮರುಕಳಿಸದೆ ಹೋಗಿಬಿಡು ನೀ ದೂರ ನನ್ನೊಂದಿಷ್ಟು ಕನಿಕರಿಸಿ.... #ಕನ್ನಡ #ಕನ್ನಡಕವಿತೆ #yqkannada #yqmandya #yqjogilove #yqjogi_love