Nojoto: Largest Storytelling Platform

ಜಗವಿಮೋಚಕ - ೧೯೪ ========================= ಒಳಿತೆಂಬುದ

ಜಗವಿಮೋಚಕ - ೧೯೪
=========================
ಒಳಿತೆಂಬುದು ಸೊಗಸಿನೊಡವೆಯೇನ್ 
ಕೆಡುಕೊಂದು ಕರುಣೆಯಪ್ಪುದಿಲ್ಲವೇನ್ 
ಒಳಿತಿನೊಳ್ತಗಲು ಆರಿದರೆ ಕೆಡಕದುವೇ 
ಕೆಡಕಿನ ಇರುಳ್ಗರೆದರೆ ಒಳಿತದುವೆ ಜಗಕೆ
ಒಳಿತು ಕೆಡುಕಿನೆಣಿಕೆಯಲ್ಲಿ ಕಳೆವುದು 
ಜನುಮವದುವೇ ಸತ್ಯವೆನಿಪನವನು
ಸ್ವರ್ಗಕೆ ದೊರೆಯೆಂದನ್ ಬಾಯೊಳ್ 
ಮುಂಜಾನೆಯೊಳ್ ಮುಸ್ಸಂಜೆಯೊಳ್ 
ಕ್ಷಣದೊಳ್ ಮಡಿ ಮೈಲಿಗೆಯೊಳ್ ತುಪ್ಪದ
ದೀಪವಚ್ಚಿದರೇ ಅವನೇನ್ ಮೆಚ್ಚುವನೇನ್ 
ಕಲ್ಲದದುವೇ ನೀ ಕೆತ್ತಿದ ರೂಪವದುವೇ
ಅಂತರಂಗದಿ ಕೇಳೊಮ್ಮೆ ನುಡಿದಂತೆ
ನಡೆದೇನೆಂದು ಅಳುಕಿಲ್ಲದ ಮನದೊಳ್
ಆತ್ಮದ ಗುಡಿಯೊಳ್ ಕರುಣೆಯೊಂದೇ
ಬೆಳಗುತಿರೆ ಅವನೊಲುವುಯುವುದಿಲ್ಲವೇನ್ ಜಗವಿಮೋಚಕ - ೧೯೪

#ಜಗವಿಮೋಚಕ #ದಿವಾಕರ್  #ಕನ್ನಡ #ಒಳಿತು #ಬಾಳು #ಬದುಕು #yqjogi #yqmandya
ಜಗವಿಮೋಚಕ - ೧೯೪
=========================
ಒಳಿತೆಂಬುದು ಸೊಗಸಿನೊಡವೆಯೇನ್ 
ಕೆಡುಕೊಂದು ಕರುಣೆಯಪ್ಪುದಿಲ್ಲವೇನ್ 
ಒಳಿತಿನೊಳ್ತಗಲು ಆರಿದರೆ ಕೆಡಕದುವೇ 
ಕೆಡಕಿನ ಇರುಳ್ಗರೆದರೆ ಒಳಿತದುವೆ ಜಗಕೆ
ಒಳಿತು ಕೆಡುಕಿನೆಣಿಕೆಯಲ್ಲಿ ಕಳೆವುದು 
ಜನುಮವದುವೇ ಸತ್ಯವೆನಿಪನವನು
ಸ್ವರ್ಗಕೆ ದೊರೆಯೆಂದನ್ ಬಾಯೊಳ್ 
ಮುಂಜಾನೆಯೊಳ್ ಮುಸ್ಸಂಜೆಯೊಳ್ 
ಕ್ಷಣದೊಳ್ ಮಡಿ ಮೈಲಿಗೆಯೊಳ್ ತುಪ್ಪದ
ದೀಪವಚ್ಚಿದರೇ ಅವನೇನ್ ಮೆಚ್ಚುವನೇನ್ 
ಕಲ್ಲದದುವೇ ನೀ ಕೆತ್ತಿದ ರೂಪವದುವೇ
ಅಂತರಂಗದಿ ಕೇಳೊಮ್ಮೆ ನುಡಿದಂತೆ
ನಡೆದೇನೆಂದು ಅಳುಕಿಲ್ಲದ ಮನದೊಳ್
ಆತ್ಮದ ಗುಡಿಯೊಳ್ ಕರುಣೆಯೊಂದೇ
ಬೆಳಗುತಿರೆ ಅವನೊಲುವುಯುವುದಿಲ್ಲವೇನ್ ಜಗವಿಮೋಚಕ - ೧೯೪

#ಜಗವಿಮೋಚಕ #ದಿವಾಕರ್  #ಕನ್ನಡ #ಒಳಿತು #ಬಾಳು #ಬದುಕು #yqjogi #yqmandya
divakard3020

DIVAKAR D

New Creator