** ಶೂನ್ಯ- ಸೊನ್ನೆ ** -------------------------- ಶೂನ್ಯವಾಗಿಹೆನು ನಾನು ನದಿಯಂತೆ ಹರಿಯುತಿರುವೆನು ನಿರಾಶೆಗಳ ಮೂಟೆ ಹೊತ್ತು ನನ್ನೆದೆ ಸವೆಯುತಿಹುದು ಗಂಧದದ ಮರದಂತೆ ಬಡವನ ಮನೆಯಂಗಳದಲಿ ಅರಳಿ ಬಾಡುವ, ಮುಟ್ಟಿ ಮುನಿಸದ ಶೂನ್ಯ ಸಂಭ್ರಮದೊಳಗಿನ ಪುಷ್ಪ ನಾನಾಗಿ ನಿಂತಿಹೆನು......!! ಸನ್ನೆಯಾಗಿಹೆನು ನಾನು ನನ್ನ ಮನದಂಗಳ ಖಾಲಿಯಾಗಿಹುದು ಆವೇಶದ ಮಾತುಗಳ ಕಳೆದು ಸಿಹಿಮುತ್ತುಗಳ ಹೆಣೆದು ಬಯಕೆಗಳ ಭಾನ ತುಂಬಿಸಿ ನಿನ್ನೊಲವಿನ ಆಗಸದಿ ಇರುಳ ನಕ್ಷತ್ರಗಳ ಎಣಿಸೋ ಖಾಲಿ ಕಡಲ ಸೊನ್ನೆಯಾಗಿ ಕಾದಿರುಳಲಿ ಕಾದು ನಿಂತಿರುವೆ.....!! #ಶೂನ್ಯ #ಸನ್ನೆ #ಒಲವು #ಭಾವನೆ #ನನ್ನವನು #yqjogi_kannada #yqkannadaquotes #krantadarshi kanti