Nojoto: Largest Storytelling Platform

ಹುಟ್ಟೆಂದಮೇಲೆ ಸಾವು ನಿಶ್ಚಿತ! ಆದರೂ ಎಲ್ಲವು ಲೆಕ್ಕಾಚಾರದ

ಹುಟ್ಟೆಂದಮೇಲೆ ಸಾವು ನಿಶ್ಚಿತ!
ಆದರೂ ಎಲ್ಲವು ಲೆಕ್ಕಾಚಾರದ ಬದುಕೆ.

ಹೆಣವಾದೆ ಕ್ಷಣದಿ ನೀ ಏನನೂ ನುಡಿಯದೆ,
ಉಸಿರುಗಟ್ಟಿಸುವ ಅಳುವಿನ ಗದ್ದಲ ಮೂಡಿದೆ,
ಇದ್ದಾಗ ನೆನೆಯದ ಎಷ್ಟೋ ಜನರು,
ನೀ ಹೆಣವಾದಾಗ ಹಾಡಿ ಹೊಗಳುತ್ತಿರುವರು.

ಏನ ಮಾಡಿದರೇನು ಹೊರಲಾರೆ ನನ್ನೊಂದಿಗೆ.
ನೀ ಬಿಟ್ಟೋದದ್ದೆಲ್ಲವೂ ಪರರ ಪಾಲಿಗೆ.
ಹೆಣ ಭಾರವಿದ್ದರೂ ಸುಟ್ಟು ಉಳಿದಿದ್ದು
ಕೇವಲ ಬೂದಿ, ಮಡಕೆಯಷ್ಟು ಮೂಳೆಗಳಷ್ಟೆ.

ಉಳಿದುದ್ದು ನೀ ತೊರೆದ ನೆನಪುಗಳಷ್ಟೆ.
ನೆನೆಸಿದ್ದು ನೀ ಮಾಡಿದ ಕರ್ಮಗಳಷ್ಟೆ.
						                                            	-Harsh

© #Death
ಹುಟ್ಟೆಂದಮೇಲೆ ಸಾವು ನಿಶ್ಚಿತ!
ಆದರೂ ಎಲ್ಲವು ಲೆಕ್ಕಾಚಾರದ ಬದುಕೆ.

ಹೆಣವಾದೆ ಕ್ಷಣದಿ ನೀ ಏನನೂ ನುಡಿಯದೆ,
ಉಸಿರುಗಟ್ಟಿಸುವ ಅಳುವಿನ ಗದ್ದಲ ಮೂಡಿದೆ,
ಇದ್ದಾಗ ನೆನೆಯದ ಎಷ್ಟೋ ಜನರು,
ನೀ ಹೆಣವಾದಾಗ ಹಾಡಿ ಹೊಗಳುತ್ತಿರುವರು.

ಏನ ಮಾಡಿದರೇನು ಹೊರಲಾರೆ ನನ್ನೊಂದಿಗೆ.
ನೀ ಬಿಟ್ಟೋದದ್ದೆಲ್ಲವೂ ಪರರ ಪಾಲಿಗೆ.
ಹೆಣ ಭಾರವಿದ್ದರೂ ಸುಟ್ಟು ಉಳಿದಿದ್ದು
ಕೇವಲ ಬೂದಿ, ಮಡಕೆಯಷ್ಟು ಮೂಳೆಗಳಷ್ಟೆ.

ಉಳಿದುದ್ದು ನೀ ತೊರೆದ ನೆನಪುಗಳಷ್ಟೆ.
ನೆನೆಸಿದ್ದು ನೀ ಮಾಡಿದ ಕರ್ಮಗಳಷ್ಟೆ.
						                                            	-Harsh

© #Death