Nojoto: Largest Storytelling Platform
nojotouser8574844034
  • 106Stories
  • 41Followers
  • 1.1KLove
    1.3KViews

  • Popular
  • Latest
  • Video
b7cebf633812d66b0bfc323ddc266e0b

ಹುಟ್ಟೆಂದಮೇಲೆ ಸಾವು ನಿಶ್ಚಿತ!
ಆದರೂ ಎಲ್ಲವು ಲೆಕ್ಕಾಚಾರದ ಬದುಕೆ.

ಹೆಣವಾದೆ ಕ್ಷಣದಿ ನೀ ಏನನೂ ನುಡಿಯದೆ,
ಉಸಿರುಗಟ್ಟಿಸುವ ಅಳುವಿನ ಗದ್ದಲ ಮೂಡಿದೆ,
ಇದ್ದಾಗ ನೆನೆಯದ ಎಷ್ಟೋ ಜನರು,
ನೀ ಹೆಣವಾದಾಗ ಹಾಡಿ ಹೊಗಳುತ್ತಿರುವರು.

ಏನ ಮಾಡಿದರೇನು ಹೊರಲಾರೆ ನನ್ನೊಂದಿಗೆ.
ನೀ ಬಿಟ್ಟೋದದ್ದೆಲ್ಲವೂ ಪರರ ಪಾಲಿಗೆ.
ಹೆಣ ಭಾರವಿದ್ದರೂ ಸುಟ್ಟು ಉಳಿದಿದ್ದು
ಕೇವಲ ಬೂದಿ, ಮಡಕೆಯಷ್ಟು ಮೂಳೆಗಳಷ್ಟೆ.

ಉಳಿದುದ್ದು ನೀ ತೊರೆದ ನೆನಪುಗಳಷ್ಟೆ.
ನೆನೆಸಿದ್ದು ನೀ ಮಾಡಿದ ಕರ್ಮಗಳಷ್ಟೆ.
						                                            	-Harsh

© #Death
b7cebf633812d66b0bfc323ddc266e0b

ಹುಟ್ಟೆಂದಮೇಲೆ ಸಾವು ನಿಶ್ಚಿತ!
ಆದರೂ ಎಲ್ಲವು ಲೆಕ್ಕಾಚಾರದ ಬದುಕೆ.

ಹೆಣವಾದೆ ಕ್ಷಣದಿ ನೀ ಏನನೂ ನುಡಿಯದೆ,
ಉಸಿರುಗಟ್ಟಿಸುವ ಅಳುವಿನ ಗದ್ದಲ ಮೂಡಿದೆ.
ಇದ್ದಾಗ ನೆನೆಯದ ಎಷ್ಟೋ ಜನರು,
ನೀ ಹೆಣವಾದಾಗ ಹಾಡಿ ಹೊಗಳುತ್ತಿರುವರು.

ಏನ ಮಾಡಿದರೇನು ಹೊರಲಾರೆ ನಿನ್ನೊಂದಿಗೆ.
ನೀ ಬಿಟ್ಟೋದದ್ದೆಲ್ಲವೂ ಪರರ ಪಾಲಿಗೆ.
ಹೆಣ ಭಾರವಿದ್ದರೂ ಸುಟ್ಟು ಉಳಿದಿದ್ದು
ಕೇವಲ ಬೂದಿ, ಮಡಕೆಯಷ್ಟು ಮೂಳೆಗಳಷ್ಟೆ.

ಉಳಿದುದ್ದು ನೀ ತೊರೆದ ನೆನಪುಗಳಷ್ಟೆ.
ನೆನೆಸಿದ್ದು ನೀ ಮಾಡಿದ ಕರ್ಮಗಳಷ್ಟೆ.

					                                               		-Harsh

©
b7cebf633812d66b0bfc323ddc266e0b

ಹುಟ್ಟಿಲ್ಲದ ಪ್ರೀತಿ - ಸಾವಿಲ್ಲದ ಪ್ರಕೃತಿ!
ಬದಲಾದ ಜೀವಕೆ - ಕೆಳೆದೋದ ನಂಬಿಕೆ
ದೂರಾಗಿರುವ ಭಾವನೆಗಳು - ಜೊತೆಗಿರುವ ನೆನಪುಗಳು
ಮರೆತೆನೆಂಬ ಮಿಥ್ಯಾ - ಉಳಿದಿರುವ ಸತ್ಯ.

							                                             -Harsh











.

© #alone
b7cebf633812d66b0bfc323ddc266e0b

ಹೇಳಲಾಗದ ಸಾವಿರಾರು ಮಾತುಗಳು ಎದೆಯೊಳಗೆ
ಹೇಳ ಹೊರಟರೆ ಸ್ಪಷ್ಟತೆ ಸಿಗುತ್ತಿಲ್ಲ ಪದಗಳಲ್ಲಿ.
ಮೌನ ಮನೆಮಾಡಿ ಆದುದ್ದೆಲ್ಲವೂ ಅಪಾರ್ಥವೇ
ಈ ಭಾವನೆಗಳ ಅರ್ಥೈಸುವುದೇಗೆ ತಿಳಿಯುತ್ತಿಲ್ಲ.
ಕ್ಷಣಿಕದಲ್ಲಿ ಎಲ್ಲವೂ ನಶ್ವರವೆಂಬಂತಾಗಿದೆ ಇಂದು.

							                                         	-Harsh






.

©
b7cebf633812d66b0bfc323ddc266e0b

Nature Quotes ಪ್ರೀತಿ ಎಂಬುದು ಮಾಯೆಯೆ ಸರಿ

ನೊಂದಿರುವೆ-ನಲಿದಿರುವೆ ನನ್ನೇ ನಾ ಅರಿಯದಂತೆ
ಆದರೂ ಅರಿತಿರುವಿರಿ ನನಗೇ ತಿಳಿಯದಂತೆ
ಮನಸ್ಸು ಹಗುರವಾಯಿತು ನಿಮ್ಮ ಬರುವಿಕೆ
ಮೂಡಿದೆ ಮನದಲಿ ಹೊಂಗಿರಣದಂತಹ ನಂಬಿಕೆ.

ಕೊಂಡರು ಸಿಗದಂತ ಪ್ರೀತಿಯ ತಂದಿರುವಿರಿ
ಕಾಣದಂತೆ ಮರೆಯಾಗದಿರಲಿ ಕೊನೆಯವರೆಗೆ
ನಂಬಿಕೆಯ ಮೇಲೆ ನಿಮ್ಮ ನಾ ಸ್ವೀಕರಿಸಿರುವೆ
ಕಳೆದೋಗದಿರಲಿ ಸುಳ್ಳಿನ ಭರವಸೆಗಳಿಂದ.

ತಿಳಿದಿಲ್ಲ ನಿಮ್ಮ ನಾನೆಷ್ಟು ಅರಿತಿರುವೆ
ಆದರೂ ಜೊತೆಗಿರುವೆ ನಿಮ್ಮೆಲ್ಲ ನೋವು-ನಲಿವಲ್ಲಿ.
ನಿಮ್ಮಷ್ಟು ಒಳ್ಳೆತನವಂತೂ ನನ್ನಲಿಲ್ಲ
ನನ್ನ ಸರಿ-ತಪ್ಪುಗಳ ಹೊಣೆಗಾರಿಕೆ ಬಿಟ್ಟಿರುವೆ ನಿಮಗೆ.

ಬಯಸಿದರೂ ಸಿಗದಂತ ಖುಷಿಯೊಂದು ತುಂಬಿದೆ ಮನದಲಿ,
ಬಯಸಿ ನಿಂತಿರುವೆ, ಕೈ ಹಿಡಿದು ನಡೆಸುವಿರಾ ನಿಮ್ಮ ಬಾಳಲಿ.

                                                                             -Harsh

© #NatureQuotes
b7cebf633812d66b0bfc323ddc266e0b

ಅನಿರೀಕ್ಷಿತವಾಗಿ ಬಂದಂತ ಅಪರಿಚಿತರು
ನಿರೀಕ್ಷೆಗೂ ಮೀರಿ ಬೆಳೆದಂತ ಸಂಬಂಧಗಳು
ನೆನೆದಾಗ ಮೊಗದಲ್ಲಿ ಮೂಡೊ ಮಂದಹಾಸ
ಜೊತೆ ಇದ್ದ ಕ್ಷಣಗಳಲ್ಲಿ ಉಂಟಾದ ಉಲ್ಲಾಸ
ಮರೆಯಾಯಿತ್ತಿಂದು ಮರೀಚಿಕೆಯಂತೆ ಹೇಳಲಾಗದೆ.
							                                            	-Harsh






.

© #SittingAlone
b7cebf633812d66b0bfc323ddc266e0b

Red sands and spectacular sandstone rock formations ಸಾವಿರಾರು ಪ್ರಶ್ನೆಗಳಿರುವುದು ಮನದಲಿ
ಎದುರಿದ್ದರೂ ಕೇಳಲಾಗುದು ಅವನಲ್ಲಿ.
ಪದಗಳಲ್ಲಿ ಬರೆಯುವೆ ಹೇಳಲಾಗದ ಮಾತುಗಳ
ಆದರೂ ಮುಗಿಯದು ಮನದಾಳದ ಭಾವನೆಗಳು.
							                                            -Harsh







.

© #Sands
b7cebf633812d66b0bfc323ddc266e0b

ಕ್ಷಣಕ್ಕೊಂದು ಭರವಸೆಯ ನೀಡುವವರ,
ಬದಲಾಗುವುದಿಲ್ಲವೆಂದು ಬದಲಾಗುವವರ,
ಎಂದೆಂದೂ ಜೊತೆಗಿರುವೆನೆಂದು ದೂರವಿರುವವರ,
ಬರುವಿಕೆಗೆ ಕಾಯುವ ಚಾತಕ ಪಕ್ಷಿಯಂತವಳು.
ಯಾರವಳು?
						                                           - Harsh



.

© #outofsight
b7cebf633812d66b0bfc323ddc266e0b

ಸಮಯದ ಮೇಲಿರೊ ನಂಬಿಕೆಯೋ?
ಬದುಕಿನ ಮೇಲಿರೊ ಬರವಸೆಯೋ?
ಬುದ್ಧಿ-ಮನಸ್ಸಿನ ನಡುವಿನ ಯುದ್ಧದಲಿ,
ತಾಳ್ಮೆಯಿಂದ ಕಾಯುವಂತಹ ಜೀವನವಿದು.
						                                              -Harsh






.

© #snowmountain
b7cebf633812d66b0bfc323ddc266e0b

ಬದುಕಲ್ಲಿ ಬದಲಾಗೋ ಭಾವನೆಗಳೆಷ್ಟೋ
ನಗುವಲ್ಲಿ ತುಂಬಿರೊ ಅರ್ಥಗಳೆಷ್ಟೋ
ನಯನಗಳಲ್ಲಿ ನುಡಿಯುವ ಮಾತುಗಳೆಷ್ಟೋ
ನೀರಸ ಮೌನದಿ ಮರೆಯಾಗೊ ವಿಷಯಗಳೆಷ್ಟೋ

                                                          - Harsh






.

©
loader
Home
Explore
Events
Notification
Profile