Nojoto: Largest Storytelling Platform

ಟಿಕ್ ಟಾಕ್ ಮಹಾಶಯರೇ ದಯವಿಟ್ಟು ಈ ತಂತ್ರಾಂಶ ರೂಪಿಸಿದ ಜನಕ

ಟಿಕ್ ಟಾಕ್ ಮಹಾಶಯರೇ ದಯವಿಟ್ಟು ಈ ತಂತ್ರಾಂಶ ರೂಪಿಸಿದ ಜನಕ ಜಹಾಂಗ್ ಯೀಮಿಂಗನ್ನು ಸಂದರ್ಶನವೊಂದನ್ನು ಕೇಳಿದ ನಂತರ ಟಿಕ್ ಟಾಕನ್ನು  ಭಾರತೀಯರಾದ ನಾವು ಉಪಯೋಗಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಿ.  ಎಚ್ಚರಗೊಳ್ಳಿ, ಎಚ್ಚರಿಸಿ, ಭಾರತೀಯತೆಯನ್ನು  ಬೆಳೆಸಿ🙏🙏🙏
ಟೀಕೆ ಟಿಪ್ಪಣಿಗಳಿಗೆ ಸದಾ ಸ್ವಾಗತ... 
#yqdvkrd_dots  #ಟಿಕ್ಟಾಕು #ಕನ್ನಡ #ಸೋಮಾರಿತನ #ತಂತ್ರಜ್ಞಾನ #yqwritings #yqgoogle #yqmandya
ಟಿಕ್ ಟಾಕ್ ನ ಚೀನಾದ ಸಾಪ್ಟ್ವೇರ್ ಡೆವಲಪರ್ ಜಹಾಂಗ್ ಯೀಮಿಂಗ್ ತಮ್ಮ ಸಂದರ್ಶನವೊಂದರಲ್ಲಿ ಟಿಕ್ ಟಾಕ್  ಆ್ಯಪ್ ನ್ನು ಯಾರ ಬಳಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೋ ಅಂತಹವರು ಸಮಯ ಕಳೆಯುವುದಕ್ಕಾಗಿ ರೂಪಿಸಲಾಗಿತ್ತು. ಆದರೆ ಅದು ಇಂದು ಪ್ರಪಂಚದ ಎಲ್ಲ ರಾಷ್ಟ್ರದ ಜನರಿಗಿಂತ ಅತಿ ಹೆಚ್ಚಾಗಿ  ಭಾರತೀಯರು ಬಳಸುತ್ತಿದ್ದು ಅದು ಚೀನಾದ ಜನರಿಗಿಂತಲೂ ಹೆಚ್ಚು ಎಂಬ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಇಂದಿನ ಎಲ್ಲ ರೀತಿಯ ಸಾಮಾಜಿಕ ಮಾದ್ಯಮಗಳು ಜನರ ತುದಿಬೆರಳಿಗೆ ತಲುಪಿದ್ದರ ಹಿಂದೆ ಇದೇ ರೀತಿಯ ಹಲವಾರು ಹುನ್ನಾರಗಳು ಕಾಣಿಸದ ಕರಾಳ ಸತ್ಯಗಳು‌ ಒಮ್ಮೊಮ್ಮೆ ಅಲ್ಲಿ ಇಲ್ಲಿ ಗೋಚರಿಸುತ್ತವೆ.‌ ಟಿಕ್ ಟಾಕನ್ನು ಅನುಸರಿಸಿ‌ ತಮ್ಮ ಕಲಾ ವೈವಿಧ್ಯವನ್ನು ಮೆರೆಯುತ್ತಿರುವ ಹೊತ್ತಿನಲ್ಲಿ ಇಂತಹ ಹೇಳಿಕೆಗಳು ಜನರ ವಿವೇಚನೆಯನ್ನು ಪ್ರಶ್ನಿಸುವಂತಿದೆ.‌ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವುದರ ಜೊತೆಗೆ ಅದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ದಪಡಿಸಿ ದುಡಿಮೆಯಲ್ಲಿ ಉಳಿದ ಅಲ್ಪ ಸ್ವಲ್ಪ ಹಣವನ್ನು ವೆಚ್ಚ ಮಾಡಿ ಇಂತಹ ಸಾಮಾಜಿಕ ಮಾಧ್ಯಮದಿಂದ ಬೆಳಗಾಗುವಷ್ಟರಲ್ಲಿ ಹಲವಾರು ಜನರು ತಮ್ಮ ಹಿಂಬಾಲಕರನ್ನು‌ ಸೃಷ್ಟಿಸಿಕೊಂಡು ಮೆರೆದಾಡುತ್ತಿದ್ದಾರೆ. ಆದರೆ ಇದರಿಂದ ನಮ್ಮದೇ ಜನರ ಆದಾಯ ಸೋರಿಕೆಯಾಗಿ ಚೀನಾದ ಮಡಿಲಿಗೆ ವರದಾನವಾಗುತ್ತಿದೆ. ಇನ್ನು ಮುಂದಾದರೂ ಯೋಚಿಸಿ ನಿರ್ಣಯ ಕೈಗೊಳ್ಳಿ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿ ಇಡೀ ಭಾರತೀಯರನ್ನು ನಿರುದ್ಯೋಗಿಗಳು, ನಿಷ್ಪ್ರಯೋಜಕರೆಂದು ಕರೆದು ಜಗತ್ತಿನೆದರು ಮಾನ ಹರಾಜು ಹಾಕಿದವರು ರೂಪಿಸಿದ ಈ ಸೋಮಾರಿ ಆ್ಯಪನ್ನು ಬಳಲಾದರೂ ನಿಮಗೆ ಮನಸ್ಸು ಹೇಗೆ ಬಂದೀತೂ.. ಭಾರತೀಯರು ರೂಪಿಸಿದ ಹಲವಾರು ಆ್ಯಪ್ಗಳಿದ್ದರೂ ಹಿತ್ತಲ ಗಿಡ ಮದ್ದಲ್ಲವೆಂಬಂತೆ ಅವುಗಳನ್ನು ತುಚ್ಚವಾಗಿ ಕಾಣುವ ಭಾರತೀಯ ಸತ್ಪ್ರಜೆಗಳೇ ಇಂತಹ ಉದ್ದಟತನದ ಹೇಳಿಕೆ ನೀಡಿದವರಿಗೆ ಬುದ್ದಿ ಕಲಿಸುವುದಕ್ಕಾದರೂ‌ ನಾವು ಈ ಟಿಕ್ ಟಾಕ್ ಆ್ಯಪನ್ನು ಉಪಯೋಗಿಸುವುದನ್ನು ಈ ಕ್ಷಣದಿಂದಲೇ ನಿಲ್ಲಿಸಬೇಕು. ಕಲೆಯ ವೈವಿಧ್ಯತೆಯನ್ನು ವ್ಯಕ್ತಪಡಿಸಲು  ಭಾರತೀಯರೇ ರೂಪಿಸಿದ ಯಾವುದಾದರೂ ಸಾಮಾಜಿಕ ‌ಮಾದ್ಯಮಗಳಿದ್ದರೆ ಅದನ್ನು ಬಳಿಸಿ‌ಕೊಂಡು‌ ಪ್ರೋತ್ಸಾಹ ನೀಡಿದರೆ ಇಂತಹ ಅವಮಾನಕರವಾದ ಮಾತುಗಳನ್ನು ಕೇಳುವ ದೌರ್ಭಾಗ್ಯವನ್ನು ತಡೆಯಬಹುದು..

divakard3020

DIVAKAR D

New Creator