ಹೃದಯ ಬಾಗಿಲ ಹೊಸ್ತಿಲಲಿ ನಾ ಬಂದು ನಿಂತಿರುವೆ ನೀನೆಕೆ ಕರೆಯಲೊಲ್ಲೆ ನೀ ಕರೆಯದೆ ಒಳ ಬರೆನು ನಾನು ಮುನಿಸ ತೊರೆದು ಕರೆಯಬಾರದೇ ನೀನು..!! ನಿನ್ನ ಒಲವಿಂದ ಕೂಗಿ ಕರೆ ನನ್ನ ಹೆಸರನ್ನು ನಾ ಮರೆತು ಬಿಡುವೆ ಜಗವನ್ನು ನಿನ್ನ ಮುನಿಸ ತಣಿಸ ಬಂದವನು ನಾನು ಮನಸ ಮಾಡದೆ ಹೊರ ತಡೆದಿರುವೆ ನೀನು..!! ನಿನ್ನ ಪ್ರೀತಿ ನನ್ನ ಜೀವಾಳ ನೀನಲ್ಲದೇ ಯಾರು ಕೇಳ್ವರು ನನ್ನ ಗೋಳ ಕೋಪ ತೊರೆದು ಬರುವಳು ನನ್ನ ನಾರಿ ಎನ್ನುತಿದೆ ನನ್ನ ಮನಸ್ಸು ಸಾರಿ ಸಾರಿ..!! ಹುಸಿಕೋಪ ಎಲ್ಲಿಯತನಕ ನಲ್ಲೆ ಸಂಕೋಚ ತೊರೆದು ಅಪ್ಪು ನೀನಿಲ್ಲೆ ನಮ್ಮೊಲವಿನ ರೂವಾರಿಗಳು ನಾವು ಜಗ ಮಚ್ಚುವ ಪ್ರೇಮಿಗಳು ನಾವು...!! #yqjogi_ಕನ್ನಡ #yqjogi_feelings #yqjogi_ನೆನಪು #ಒಲವು_ಧಾರೆ #ಪ್ರೀತಿಬರಹ #ಹುಸಿಮುನಿಸು #ಸವಿಘಳಿಗೆ #krantadarshi kanti